ಹಾಸ್ಟೆಲ್ ವಿದ್ಯಾರ್ಥಿನಿಗೆ ಹಲ್ಲೆ, ನಗದಿನೊಂದಿಗೆ ಆರೋಪಿ ಪರಾರಿ
ತೊಕ್ಕೊಟ್ಟು, ಡಿ. 5: ಮಹಿಳಾ ಹಾಸ್ಟೆಲ್ ಕೊಠಡಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ಕೊಠಡಿಯೊಳಗಿದ್ದ ವಿದ್ಯಾರ್ಥಿನಿಗೆ ಹಲ್ಲೆಗೈದು, ಬೆದರಿಸಿ ಎಟಿಎಂ ಕಾರ್ಡ್ ಹಾಗೂ ನಗದಿನೊಂದಿಗೆ ಪರಾರಿಯಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಹಿಳಾ ಹಾಸ್ಟೆಲೊಂದರಲ್ಲಿ ಮಂಗಳವಾರ ನಡೆದಿದೆ.
ಪ್ರತಿಷ್ಠಿತ ಸಂಸ್ಥೆಯೊಂದರ ಮಹಿಳಾ ಹಾಸ್ಟೆಲ್ ಕೊಠಡಿಯಲ್ಲಿ ತಂಗಿದ್ದ ವಿದ್ಯಾರ್ಥಿನಿ ಬಾಗಿಲು ಹಾಕಿ ಮಲಗಿದ್ದ ಸಮಯದಲ್ಲಿ ಬೆಳಗ್ಗಿನ ಜಾವ ನಾಲ್ಕು ಗಂಟೆಯ ಹೊತ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಾಗಿಲು ತಟ್ಟಿದ್ದು, ಹಾಸ್ಟೆಲ್ ಸಿಬ್ಬಂದಿಯಾಗಿರಬಹುದು ಎಂದು ಬಾಗಿಲು ತೆರೆದಾಗ ತಕ್ಷಣ ಬಾಗಿಲು ದೂಡಿ ಕೊಠಡಿಗೆ ನುಗ್ಗಿದ ದುಷ್ಕರ್ಮಿ ವಿದ್ಯಾರ್ಥಿನಿಯನ್ನು ಬೆದರಿಸಿ, ಹಲ್ಲೆ ನಡೆಸಿ ಪರ್ಸ್‍ನಲ್ಲಿದ್ದ ಮೂರು ಸಾವಿರ ರೂ., ಎಟಿಎಂ ಕಾರ್ಡ್ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಉಳ್ಳಾಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿದ್ಯಾರ್ಥಿನಿ ತಿಳಿಸಿದ್ದಾರೆ.
Next Story





