ಎಸ್ಸೆಸ್ಸೆಫ್ ತೊಕ್ಕೋಟ್ಟು: ಮೌಲಿದ್ ಮಜ್ಲಿಸ್, ಅರ್ಹ ಕುಟುಂಬಕ್ಕೆ ಧನ ಸಹಾಯ

ತೊಕ್ಕೋಟ್ಟು, ಡಿ. 5: ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ವತಿಯಿಂದ ಮೆಹ್‍ಫಿಳೆ ಮುಸ್ತಫಾ ಮೌಲಿದ್ ಮಜ್ಲಿಸ್ ಹಾಗೂ ದ.ಕ. ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡ ಎಸ್ಸೆಸ್ಸೆಫ್ ತೊಕ್ಕಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಚೇರ್‍ಮ್ಯಾನ್ ಅಲ್ತಾಫ್ ಕುಂಪಲ ಹಾಗೂ ಎಸ್‍ವೈಎಸ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಶ್ರಫ್ ಕಿನಾರ ಅವರನ್ನು ಸನ್ಮಾನಿಸಲಾಯಿತು.
ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆಯಲ್ಲಿ ಎಸ್‍ವೈಎಸ್ ಉಳ್ಳಾಲ ಸೆಂಟರ್ ನಾಯಕ ಬಶೀರ್ ಅಹ್ಸನಿ ತೋಡಾರ್ ಉದ್ಘಾಟಿಸಿದರು. ಸಯ್ಯಿದ್ ಜಲಾಲ್ ತಂಙಳ್ ಅಳೇಕಲ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ಅರ್ಹ ಕುಟುಂಬಕ್ಕೆ ವ್ಯಾಪಾರಕ್ಕಾಗಿ ರೂ. 1,50,000 ಸಹಾಯ ಧನ ನೀಡಲಾಯಿತು.
ಸಯ್ಯಿದ್ ಖುಬೈಬ್ ತಂಙಳ್, ಸಯ್ಯಿದ್ ಜವಾದ್ ತಂಙಳ್, ರಶೀದ್ ಹಾಜಿ ಪಾಂಡೇಶ್ವರ, ಇಕ್ಬಾಲ್ ಹಾಜಿ ಕುಂಪಲ, ಉಮರಬ್ಬ ಕುಂಪಲ, ಸೆಕ್ಟರ್ ಉಪಾಧ್ಯಕ್ಷ ಶಮೀರ್ ಸೇವಂತಿಗುಡ್ಡೆ, ಇಮ್ರಾನ್ ಸ್ವಲಾತ್ ನಗರ, ಕಾರ್ಯದರ್ಶಿ ಬಾತಿಷ್ ಮಂಚಿಲ, ಮನ್ಸೂರ್ ಚೆಂಬುಗುಡ್ಡೆ, ಶಮೀರ್ ಮದನಿನಗರ, ಶಮೀರ್ ಹಿದಾಯತ್ ನಗರ, ಫಾಝಿಲ್, ಆರಿಫ್ ಅಳೇಕಲ ಉಪಸ್ಥಿತರಿದ್ದರು.
ಸೆಕ್ಟರ್ ಮಾಧ್ಯಮ ಕಾರ್ಯದರ್ಶಿ ಬಿ.ಎಸ್. ಇಸ್ಮಾಈಲ್ ಕುತ್ತಾರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ ವಂದಿಸಿದರು







