ಎಸೆಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಕಾರ್ಯಾಗಾರ

ಉಡುಪಿ, ಡಿ.5: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕ, ಲಯನ್ಸ್, ಲಯನೆಸ್, ಲಿಯೋ ಕ್ಲಬ್ ಉಡುಪಿ ಇಂದ್ರಾಳಿ ಇವುಗಳ ಸಂಯುಕ್ತ ಆಶ್ರಯ ದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಹಾಗೂ ಎಸೆಸೆಲ್ಸಿ ನಂತರ ಮುಂದೇನು? ಎಂಬ ವಿಷಯದ ಕುರಿತು ಮಾಹಿತಿ ಮತ್ತು ಮಾರ್ಗ ದರ್ಶನ ಕಾರ್ಯಾಗಾರವು ಇತ್ತೀಚೆಗೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಲಯನ್ಸ್ ನಿಕಟಪೂರ್ವ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಇಂದ್ರಾಳಿ ಲಯನ್ಸ್ ಕ್ಲಬ್ ಅಧ್ಯಕ್ಷ ದಿವಾಕರ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಶೋಭಾ ದಿವಾಕರ್, ಎಂಇಟಿ ಶಾಲೆಯ ಆಡಳಿತಾಧಿಕಾರಿ ಖಲೀಲ್ ಅಹ್ಮದ್, ಸಾಲಿಹಾತ್ ಶಾಲೆಯ ಆಡಳಿತಾಧಿಾರಿ ಅಸ್ಲಂ ಹೈಕಾಡಿ ಉಪಸ್ಥಿತರಿದ್ದರು.
ಅಪರ ಜಿಲ್ಲಾ ಸರಕಾರಿ ವಕೀಲ ಮುಹಮ್ಮದ್ ಸುಹಾನ್ ಸಾಸ್ತಾನ ಹಾಗೂ ಮಂಗಳೂರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಗೌರವ ಸಲಹೆಗಾರ ರಫೀಕ್ ಮುಹಮ್ಮದ್ ಮಂಗಳೂರು ಕಾರ್ಯಾಗಾರ ನಡೆಸಿಕೊಟ್ಟರು. ಜಮೀಯ್ಯುತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷ ಖತೀಬ್ ಅಬ್ದು ರ್ರಶೀದ್ ಸ್ವಾತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಬೀರ್ ಅಹ್ಮದ್ ಕಿರಾತ್ ಪಠಿಸಿದರು. ಉಡುಪಿ ಘಟಕದ ಕಾರ್ಯದರ್ಶಿ ಕಾಸಿಂ ಬಾರಕೂರು ವಂದಿಸಿದರು. ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂ ಪಿಸಿದರು. ಸಮೀರ್ ಮುಹಮ್ಮದ್ ಹಾಗೂ ಮುಶೀರ್ ಶೇಕ್ ಸಹಕರಿಸಿದರು. ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





