ಹುಣಸೂರು ಘಟನೆ: ಎಸ್ಪಿ ಸ್ಪಷ್ಟನೆ
ಮೈಸೂರು,ಡಿ.5: ಹುಣಸೂರು ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಸದರ ನಡುವೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಎಸ್ಪಿ ಸ್ಪಷ್ಟೀಕರಣ ನೀಡಿದ್ದು, ವದಂತಿಗಳಿಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹುಣಸೂರಿನಲ್ಲಿ ನಡೆದ ಘಟನೆಗೆ ಸಂಸದರು ಮತ್ತು ತನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುಲಾಗುತ್ತಿದೆ. ಕಾನೂನಿನಡಿಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆಯೇ ಹೊರತು ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೆರವಣಿಗೆಯನ್ನು ನಿಷೇಧಿಸಲಾಗಿದೆ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಆದರೆ, ಮಾನ್ಯ ಜಿಲ್ಲಾಧಿಕಾರಿ ಮೆರವಣಿಗೆಯನ್ನು ನಿಷೇಧಿಸಿಲ್ಲ. ಮೆರವಣಿಗೆಗೆ ಇನ್ನೊಂದು ಪ್ರದೇಶವನ್ನು ಸೇರಿಸಬೇಕೆಂಬ ಬೇಡಿಕೆ ಇತ್ತು. ಮೆರವಣಿಗೆಯನ್ನು ನಿಷೇಧಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ. ಆದೇಶ ಮಾಡುವುದು, ನಿಷೇಧಿಸುವುದು, ಮಾರ್ಪಡಿಸುವುದು ದಂಡಾಧಿಕಾರಿಗೆ ಸೇರಿದ್ದು. ಪೊಲೀಸ್ ಇಲಾಖೆಗೆ ಮಾರ್ಪಡಿಸುವ ಅಥವಾ ನಿಷೇಧಿಸುವ, ಪರವಾನಿಗೆ ನೀಡುವ ಅಧಿಕಾರ ಇಲ್ಲವೆಂದು ತಿಳಿಸಿದ್ದಾರೆ.







