ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ವತಿಯಿಂದ ಮದ್‌ಹುರ್ರಸೂರ್ ಪ್ರಭಾಷಣ

ಕೊಣಾಜೆ, ಡಿ. 5: ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ವತಿಯಿಂದ ಆಯೋಜಿಸಿದ ಮದ್‌ಹುರ್ರಸೂರ್ ಪ್ರಭಾಷಣ ದೇರಳಕಟ್ಟೆ ಗ್ರೀನ್ ಗ್ರೌಂಡ್‌ನಲ್ಲಿ ನಡೆಯಿತು.
ಅಲ್-ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾವುರಂ ಮುಖ್ಯ ಪ್ರಭಾಷಣಗೈದರು. ಎಸ್‌ವೈಎಸ್ ಮತ್ತು ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ಗೌರವಾಧ್ಯಕ್ಷ ಹಾಜಿ ಡಿ. ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಿನ್ಯ ದಾರುಸ್ಸಲಾಂ ವಾದಿತ್ತೈಬ ವಿದ್ಯಾಸಂಸ್ಥೆ ಅಧ್ಯಕ್ಷ ಸಯ್ಯದ್ ಅಮೀರ್ ತಂಙಳ್, ಅಹಾರ ಸಚಿವ ಯು.ಟಿ ಖಾದರ್, ಮಂಗಳೂರು ತಾ.ಪಂ ಸದಸ್ಯ ಮೊಹಮ್ಮದ್ ಮೋನು, ಗೇರು ನಿಗಮದ ಅಧ್ಯಕ್ಷ ಬಿ.ಎಸಚ್ ಖಾದರ್, ಅಲ್ಪ ಸಂಖ್ಯಾತ ದ.ಕ ಜಿಲ್ಲಾಧ್ಯಕ್ಷ ಎನ್.ಎಸ್ ಕರೀಂ, ಸಯ್ಯದ್ ಬಾತೀಷ್ ತಂಙಳ್ ಕಿನ್ಯ, ದ.ಕ ಜಿಲ್ಲಾ ಮುಶಾವರ ಸದಸ್ಯ ಇಬ್ರಾಹೀಂ ಬಾಖವಿ ಕೆ.ಸಿ ರೋಡು, ಝೈನ್ ಸಖಾಫಿ ಉಳ್ಳಾಲ, ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ, ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ ಕೇಂದ್ರ ಸಮಿತಿ ಸದಸ್ಯ ಕೆ.ಎಸ್ ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಉಳ್ಕಾಲ ಮುಹೀಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ, ಮದರಸ ಮ್ಯಾನೇಜ್‌ಮೆಂಟ್ ಕಲ್ಲಡ್ಕ ರೇಂಜ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಗೋಲ್ಡನ್, ಬದ್ರಿಯ ಕೇಂದ್ರ ಜುಮಾ ಮಸೀದಿ ಮಾಜಿ ಅದ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಎಸ್ಕೆಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ದೇರಳಕಟ್ಟೆ ಅನ್ಸಾರುಲ್ ಮುಸ್ಲಿಮೀನ್ ಅಸೋಶಿಯೇಸನ್ ಅಧ್ಯಕ್ಷ ಇಲ್ಯಾಸ್ ಹಾಜಿ, ಮನಾರುಲ್ ಹುದಾ ಮಸೀದಿ ಅಧ್ಯಕ್ಷ ಸಯ್ಯದಾಲಿ, ಬದ್ಯಾರ್ ಸಂಶುಲ್ ಉಮಾ ಮದರಸ ಅಧ್ಯಕ್ಷ ಇಬ್ರಾಹೀಂ ಬದ್ಯಾರ್, ಸಂಶುಲ್ ಉಲಮಾ ಇಫುಲ್ ಕುರ್‌ಅನ್ ಸಂಸ್ಥೆಯ ಅಧ್ಯಕ್ಷ ಇಸ್ಹಾಕ್ ಹಾಜಿ ನಾಟೆಕಲ್, ಎಸ್ಕೆಎಸ್ಸೆಸ್ಸೆಫ್ ಕ್ಲಸ್ಟರ್ ಕಾರ್ಯದರ್ಶಿ ನೌಷಾದ್ ಬದ್ಯಾರ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ಸಂಚಾಲಕ ಕೆ.ಎಸ್ ಫಾರೂಕ್ ಹಾಜಿ, ಅಧ್ಯಕ್ಷ ನೌಫಲ್ ಬಿ, ಕಾರ್ಯದರ್ಶಿ ಮುನ್ಸೀದ್, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಡಿ.ಎಂ ಮೊಹಮ್ಮದ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಅಲ್-ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾವುರಂ ಚಾಲನೆ ನೀಡಿದರು.
ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ನಿರ್ದೇಶಕ ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ಸ್ವಾಗತಿಸದರು. ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯಾಧ್ಯಕ್ಷ ಇಬ್ರಾಹೀಂ ಕೊಣಾಜೆ ವಂದಿಸಿದರು.





