ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ
ಬಂಟ್ವಾಳ, ಡಿ. 5: ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಕೇಪು ಗ್ರಾಮದ ದೇವುಮೂಲೆಯ ನೀರ್ಕಜೆ ಎಂಬಲ್ಲಿ ನಡೆದಿದೆ.
ಕೇಪು ಗ್ರಾಮದ ದೇವುಮೂಲೆ ಶಿವಣ್ಣ ಗೌಡ ಎಂಬವರ ಪುತ್ರಿ ಜಯಶ್ರೀ (40) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ.
ಪತಿ ಶೀನಪ್ಪ ಗೌಡ ದಿನಂಪ್ರತಿ ಮದ್ಯಪಾನ ಮಾಡಿ ಜಯಶ್ರೀಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಜೀವನದಲ್ಲಿ ಬೇಸತ್ತ ಜಯಶ್ರೀ ಮನೆ ಸಮೀಪದ ಗುಡ್ಡದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಧರ್ಮಸ್ಥಳ ಸ್ವ-ಸಹಾಯ ಗುಂಪು ಹಾಗೂ ಎಲ್‌ಐಸಿಯ ಸೇವಾಪ್ರತಿನಿಧಿಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಶೀನಪ್ಪ ಗೌಡ ಸ್ವ-ಸಹಾಯ ಗುಂಪಿನ ಲೆಕ್ಕಪತ್ರದ ಪುಸ್ತಕಗಳನ್ನು ಹರಿದು ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಸದಸ್ಯರ ಆರೋಪವಾಗಿದೆ.
ಈ ಸಂಬಂಧ ಜಯಶ್ರೀ ಮನೆಯವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.





