ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರಿಗೆ ಸೂಚನೆ
ಉಡುಪಿ, ಡಿ.5: ಕೇಂದ್ರ ಸರಕಾರದ ಆದೇಶದಂತೆ ಎಲ್ಲ ಗ್ರಾಹಕರು ತಮ್ಮ ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕಾಗಿದೆ ಎಂದು ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್ ಬೊರ್ಜಿಯಾ ತಿಳಿಸಿದ್ದಾರೆ.
ಡಿ.31ರೊಳಗೆ ತಮ್ಮ ಸಿಂಡಿಕೇಟ್ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಆಧಾರ ಸಂಖ್ಯೆಯ ಜೋಡಣೆ ಹಾಗೂ ದೃಢೀಕರಣ ಮಾಡಿಕೊಳ್ಳುವಂತೆ ಎಂದು ಮನವಿ ಮಾಡಿದ್ದಾರೆ. 2018ರ ಜನವರಿ 1ರಿಂದ ಆಧಾರ ಸಂಖ್ಯೆ ಜೋಡಣೆ ಮಾಡದ ಮತ್ತು ದೃಢೀಕರಣಗೊಳ್ಳದ ಬ್ಯಾಂಕ್ ಖಾತೆಗಳು ಸ್ಥಗಿತಗೊಳ್ಳಲಿವೆ ಎಂದವರು ತಿಳಿಸಿದರು.
ಎಟಿಎಂನಿಂದ, ಬ್ಯಾಂಕಿನ ವೆಬ್‌ಸೈಟ್ ಮುಖಾಂತರ, ಇಂಟರ್‌ನೆಟ್ ಮುಖಾಂತರ, ಶಾಖೆಗಳ ಮುಖಾಂತರ, ಮೊಬೈಲ್ ಬ್ಯಾಂಕಿಂಗ್ ಆ್ಯಪ್, ಹಾಗೂ ಶಾಖೆಗಳ ಮುಖಾಂತರ ಆಧಾರ ಜೋಡಣೆ ಮಾಡಿಕೊಳ್ಳಬಹುದು. ಬ್ಯಾಂಕಿನ ವೆಬ್‌ಸೈಟ್ ಹಾಗೂ ಶಾಖೆಗಳ ಮುಖಾಂತರ ಆಧಾರ ದೃಢೀಕರಣ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
Next Story





