ಯುವತಿ ನಾಪತ್ತೆ
ಉಡುಪಿ, ಡಿ.5: ಕಾಪುವಿನ ಉಳಿಯಾರಗೋಳಿ ಗ್ರಾಮದ ಪೊಲಿಪುಗುಡ್ಡೆ ಲಕ್ಷೀಜನಾರ್ಧನ ಭಜನಾ ಮಂದಿರ ಬಳಿಯ ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ಜಾಸ್ಮಿನ್(22) ಟ್ಯೂಶನ್‌ಗೆಂದು ಹೋದವರು ಟ್ಯೂಶನ್‌ಗೂ ಹೋಗದೇ, ಮನೆಗೂ ಮರದೇ ನಾಪತ್ತೆ ಯಾಗಿದ್ದಾರೆ.
165 ಸೆ.ಮೀ ಎತ್ತವಿರುವ ಜಾಸ್ಮಿನ್ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುತ್ತಾರೆ. ಇವರು ಯಾರಿಗಾದರೂ ಪತ್ತೆಯಾದಲ್ಲಿ ಕಾಪು ಪೊಲೀಸ್ ಠಾಣೆಯ ದೂರವಾಣಿ: 0820-2551033, 9480805449, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ: 0820- 2520333, 9480805431 ಇಲ್ಲಿಗೆ ಸಂಪರ್ಕಿಸುವಂತೆ ಕಾಪು ಪೊಲೀಸ್ ಠಾಣೆ ಪ್ರಕಟನೆ ತಿಳಿಸಿದೆ.
Next Story





