ನ್ಯಾಯಾಂಗದ ಮೇಲೆ ನಂಬಿಕೆ ದೃಢ ಪಡಿಸಲು ವಕೀಲರು-ನ್ಯಾಯಾಧೀಶರು ಶ್ರಮಿಸಲಿ: ನ್ಯಾ.ಪ್ರಭಾವತಿ ಹಿರೇಮಠ್

ಚಿಕ್ಕಮಗಳೂರು, ಡಿ.5: ನ್ಯಾಯಾಂಗದ ಬಗ್ಗೆ ಜನರಲ್ಲಿರುವ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಕೀಲರು ಮತ್ತು ನ್ಯಾಯಾಧೀಶರು ಒಂದು ರಥದ ಎರಡು ಚಕ್ರಗಳಂತೆ ಶ್ರಮಿಸಬೇಕು ಎಂದು ಜಿಲ್ಲಾ ಸತ್ರ ್ಯಾಯಾಧೀಶೆ ಪ್ರಭಾವತಿ ಹಿರೇಮಠ್ ತಿಳಿಸಿದ್ದಾರೆ.
ನಗರದ ರೋಟರಿ ಸಭಾಂಗಣದಲ್ಲಿ ವಕೀಲರ ಸಂಘದಿಂದ ಏರ್ಪಡಿಸಲಾಗಿದ್ದ ವಕೀಲರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನ್ಯಾಯಾಧೀಶರು ಮತ್ತು ವಕೀಲರು ಎಂಬ ಎರಡು ಚಕ್ರಗಳು ಸರಿದಿಕ್ಕಿನಲ್ಲಿ ಚಲಿಸಿದರೆ ನ್ಯಾಯದಾನ ರಥ ಸಮರ್ಪಕವಾಗಿ ಮುಂದೆ ಸಾಗಲು ಸಾಧ್ಯವಾಗುತ್ತದೆ. ಸಮಾಜದ ಬದಲಾವಣೆಯ ಆವಶ್ಯಕತೆಗಳು, ಯಾವ ಪಿಡುಗು ಸಮಾಜದಿಂದ ತೊಲಗಬೇಕು. ಸಮಾಜಕ್ಕೆ ತಗುಲಿದ ಕಂಟಕ ಯಾವುದು ಎನ್ನುವುದನ್ನು ನ್ಯಾಯವಾದಿಗಳು ಮನಗಂಡು ಅದನ್ನು ನಿವಾರಣೆ ಮಾಡಿದ ಬಹುದೊಡ್ಡ ಜವಾಬ್ದಾರಿ ನಮ ್ಮಮೇಲಿದೆ ಎಂದರು.
ಇದೇ ವೇಳೆ ಹಿರಿಯ ನ್ಯಾಯವಾದಿ ಟಿ.ಎಂ. ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ, ಗೌರವಿಸ ಲಾಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಪ್ರಶಸ್ತಿ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಾರ್ಯಕ್ರಗಳನ್ನು ಏರ್ಪಡಿಸಲಾಗಿತ್ತು.
ಭಾರತೀಯ ವಕೀಲರ ಪರಿಷತ್‌ನ ಸದಸ್ಯ ಎಸ್.ಎಲ್. ಬೋಜೇಗೌಡ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ದುಶ್ಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ುತ್ತು ವಕೀಲರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಿ.ಎಂ. ರಾಜೇಶ್ ಸ್ವಾಗತಿಸಿದರು. ಎಸ್.ಎಸ್. ವೆಂಕಟೇಶ್ ನಿೂಪಿಸಿದರು. ರಮೇಶ್ ವಂದಿಸಿದರು.







