ದಿಲ್ಲಿಯಲ್ಲಿ 2020ರ ತನಕ ಅಂತಾರಾಷ್ಟ್ರೀಯ ಪಂದ್ಯವಿಲ್ಲ
ಹೊಸದಿಲ್ಲಿ, ಡಿ.5: ವಾಯು ಮಾಲಿನ್ಯದ ಬಗ್ಗೆ ಶ್ರೀಲಂಕಾ ಆಟಗಾರರ ದೂರು ಹಾಗೂ ಬಿಸಿಸಿಐ ರೊಟೇಶನ್ ನಿಯಮದಿಂದಾಗಿ ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ 2020ರ ತನಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುುವುದಿಲ್ಲ. ದಟ್ಟ ಹೊಗೆಯಿಂದ ಉಸಿರಾಟದ ಸಮಸ್ಯೆ ಉಂಟಾಗಿದೆ ಎಂದು ಶ್ರೀಲಂಕಾ ಆಟಗಾರರು ದೂರು ನೀಡಿದ ಬಳಿಕ ದಿಲ್ಲಿ ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡೆಗಳ ಆಯೋಜಿಸಲು ಸಮರ್ಥವಾಗಿದೆಯೇ? ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ‘‘ಬಿಸಿಸಿಐ ಪ್ರತಿವರ್ಷ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಸ್ವದೇಶಿ ಸರಣಿ ಆಡುತ್ತದೆ. ನೂತನ ಭವಿಷ್ಯದ ಕಾರ್ಯಕ್ರಮ ಪಟ್ಟಿ ಪ್ರಕಾರ ಭಾರತ 2020ರ ಫೆಬ್ರವರಿ-ಮಾರ್ಚ್‌ನಲ್ಲಿ ಸ್ವದೇಶಿ ಸರಣಿ ಆಡಲಿದೆ. ಹೀಗಾಗಿ 2020ಕ್ಕೆ ಮೊದಲು ದಿಲ್ಲಿಯ ಕೋಟ್ಲಾ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯ ನಡೆಯುವ ಸಾಧ್ಯತೆಯಿಲ್ಲ’’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





