ಇಸ್ಪೀಟ್ ಅಡ್ಡೆಯ ಮೇಲೆ ದಾಳಿ: ನಾಲ್ವರ ಬಂಧನ
ಕೊಳ್ಳೇಗಾಲ.ಡಿ.6: ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿ ನಾಲ್ವರು ಬಂಧಿಸುವಲ್ಲಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಮುಜೀದ್, ರಿಯಾಜ್, ಅನ್ವರ್ ಹಾಗೂ ಮೆಹಬೂಬ್ ಪಾಷ ಬಂದಿತ ಆರೋಪಿಗಳು.
ಪಟ್ಟಣದ ಆರ್‍ಎಂಸಿ ಗೋಡಾನ್ ಮುಂಭಾಗದಲ್ಲಿ ಜೂಜಾಡುವುದಾಗಿ ತಿಳಿದು ಪಟ್ಟಣ ಪೊಲೀಸ್ ಠಾಣೆ ಎಸ್‍ಐ ಎಂ.ನಾಯಕ್ ಅವರು ಸಿಬ್ಬಂದಿಗಳ ಜೊತೆ ತೆರಳಿ ದಾಳಿ ನಡೆಸಿ ಪಣಕ್ಕಿಟ್ಟಿದ್ದ 2,300 ರೂ ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
Next Story





