ಬಂಟ್ವಾಳ : ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ

ಬಂಟ್ವಾಳ, ಡಿ. 6:ಕೆಲಸಕ್ಕೆ ಹೋದ ವ್ಯಕ್ತಿಯೋರ್ವರು ಮನೆಗೆ ವಾಪಸು ಬಾರದೆ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರನ್ನು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನೀರಪಾದೆ ನಿವಾಸಿ ದಿನೇಶ್ (38) ಎಂದು ಹೆಸರಿಸಲಾಗಿದೆ.
ದಿನೇಶ್ ಅವರು ಅಂಗವಿಕಲಾರಿದ್ದು, ಹೋಟೆಲ್‍ವೊಂದಕ್ಕೆ ಕೆಲಸಕ್ಕೆಂದು ಮಂಗಳೂರಿಗೆ ಹೋದವರು ವಾಪಸು ಮನೆಗೆ ಬಂದಿಲ್ಲ ಎಂದು ದಿನೇಶ್ ತಾಯಿ ಅಪ್ಪಿ ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





