ಗೋಳಿತ್ತಡಿ: ರಸ್ತೆ ಡಾಮರೀಕರಣಕ್ಕೆ ಸಚಿವ ರೈಯವರಿಂದ ಶಂಕುಸ್ಥಾಪನೆ

ಕಡಬ, ಡಿ.06. ಉಪ್ಪಿನಂಗಡಿ-ಸಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಏಣಿತಡ್ಕ-ಗೋಳಿತ್ತಡಿ ರಸ್ತೆಯ ಸುಮಾರು ಒಂದೂವರೆ ಕಿಲೋಮೀಟರ್ ಉದ್ದ ರಸ್ತೆಗೆ ಡಾಮರೀಕರಣಕ್ಕಾಗಿ ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ರಾಮಕುಂಜದ ಗೋಳಿತ್ತಡಿಯಲ್ಲಿ ನಾಮ ಫಲಕ ಅನಾವರಣ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಉದನೆಯಲ್ಲಿ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ ನೆರವೇರಿ, ಬಳಿಕ ಶಾಂತಿಮೊಗೇರು ನೂತನ ಸೇತುವೆ ಉದ್ಘಾಟನೆ ಮಾಡಿದ ಸಚಿವರು ಸಂಜೆ ತರಾತುರಿಯಲ್ಲಿ ಗೋಳಿತ್ತಡಿಯಲ್ಲಿ ನಬಾರ್ಡ್ ಯೋಜನೆಯಡಿ ಸುಮಾರು 49 ಲಕ್ಷ ರೂನಲ್ಲಿ ನಡೆಯುವ ಕಾಮಗಾರಿಗೆ ಶಿಲಾನ್ಯಾಸ ನೆವೇರಿಸಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ರಾಜ್ಯ ಸಮಾಜಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕಾಂಗ್ರೇಸ್ ಮುಖಂಡರಾದ ಆದಂ ಪಿಕುಡೇಲ್, ಯತೀಶ್ ಮೊದಲಾದವರು ಉಪಸ್ಥಿತರಿದ್ದರು.
Next Story





