ಕೆ.ವಿ.ಅಕ್ಷರಗೆ ‘ರಂಗಭೂಮಿ’ ಪ್ರಶಸ್ತಿ

ಉಡುಪಿ, ಡಿ.6: ಉಡುಪಿ ರಂಗಭೂಮಿ ಕೊಡಮಾಡುವ ರಂಗಭೂಮಿ ಪ್ರಶಸ್ತಿಗೆ ಈ ಬಾರಿ ಹಿರಿಯ ನಾಟಕಕಾರ, ನಿರ್ದೇಶಕ ಕೆ.ವಿ.ಅಕ್ಷರ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು 10000ರೂ. ನಗದು ಸಹಿತ ಬಿರುದು, ಫಲಕವನ್ನು ಒಳ ಗೊಂಡಿದೆ. ಜ.7ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪ ದಲ್ಲಿ ನಡೆಯಲಿರುವ 38ನೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗ ಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





