ದೃಶ್ಯಕಲಾವಿದರಿಂದ ಅರ್ಜಿ ಆಹ್ವಾನ
ಉಡುಪಿ, ಡಿ.6: ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರತಿ ತಿಂಗಳಲ್ಲಿ 4 ದಿನದ ತಿಂಗಳ ಚಿತ್ರ ಕಾರ್ಯಕ್ರಮವನ್ನು ಯುವ ಕಲಾವಿದರಿಗಾಗಿ ನಡೆಸಲಿದ್ದು ಆಸಕ್ತ ಯುವ ಕಲಾವಿದರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ತಿಂಗಳ ಚಿತ್ರಕ್ಕಾಗಿ ಅರ್ಜಿ ಸಲ್ಲಿಸುವ ಕಲಾವಿದರು ತಮ್ಮ ಇತ್ತೀಚಿನ ಭಾವ ಚಿತ್ರದೊಂದಿಗೆ ಸ್ವ-ವಿವರವನ್ನು ಭರ್ತಿ ಮಾಡಿ ಹಾಗೂ ಎರಡು ಕಲಾಕೃತಿಗಳ ಛಾಯಾಚಿತ್ರದೊಂದಿಗೆ ಅಕಾಡೆಮಿಗೆ ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ಜ.6ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಕ್ಕಾಗಿ ಅಕಾಡೆಮಿಯ ಕಾರ್ಯಾಲಯ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002, ದೂರವಾಣಿ: 080-22480 297 ಸಂಪರ್ಕಿಸ ಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





