ರಾಜ್ಯಮಟ್ಟದ ಕರಾಟೆ ಸ್ಪರ್ಧೆ : ಆಕಾಂಕ್ಷ ಗೆ ಚಿನ್ನ

ಪುತ್ತೂರು,ಡಿ.6: ಸುದಾನ ಶಾಲೆಯ ಏಳನೆಯ ತರಗತಿ ವಿದ್ಯಾರ್ಥಿನಿ ಆಕಾಂಕ್ಷ ಎ. ರಾವ್ ಪುತ್ತೂರಿನ ಕದಿಹೈ ಮಾರ್ಷಲ್ ಅಕಾಡೆಮಿ ವತಿಯಿಂದ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಇಂಟರ್ ಡೋಜೋ ಕರಾಟೆ ಶಾಂಪಿಯನ್‍ಶಿಪ್‍ನಲ್ಲಿ ಟೀಂ ಕಟಾ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಚಿನ್ನ, ವೈಯಕ್ತಿಕ ಕುಮಿಟೆ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಬೆಳ್ಳಿ ಹಾಗೂ ವೈಯಕ್ತಿಕ ಕಟಾ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಕರಾಟೆ ಗುರು ಟಿ.ಡಿ.ಥೋಮಸ್ ಶಿಷ್ಯೆಯಾಗಿರುವ ಈಕೆ ಪುತ್ತೂರಿನ ಅಮೃತ್ ಪಿ.ರಾವ್ ಹಾಗೂ ರವಿಕಲಾ ದಂಪತಿ ಪುತ್ರಿ.
Next Story





