ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನಕ್ಕೆ ಶ್ರೀ ರವಿಶಂಕರ ಗುರೂಜಿ ಭೇಟಿ

ಉಳ್ಳಾಲ,ಡಿ.6: ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನಕ್ಕೆ ಬುಧವಾರ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ ಗುರೂಜಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಆಗಮಿಸಿದ ಗುರೂಜಿ ಅವರನ್ನು ದೇವಸ್ಥಾನದ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ, ದೇವಸ್ಥಾನದ ಮುಖ್ಯ ಅರ್ಚಕ ಸೂರ್ಯನಾರಾಯಣ ಹೊಳ್ಳ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಮೇಶ್ ಕೊಲ್ಯ, ಸುಧಾಕರ ಭಂಡಾರಿ, ರುಕ್ಮಯ ಬಂಗೇರ, ಯು. ಸೋಮಯ್ಯ, ರಾಘವ ಆರ್.ಉಚ್ಚಿಲ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಉಳ್ಳಾಲ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನದ ಶ್ರೀಕರ ಕಿಣಿ, ದೀಪಕ್ ಪಿಲಾರ್, ವಸಂತ ಉಳ್ಳಾಲ್, ಯೋಗೀಶ್ ಸೋಮೇಶ್ವರ, ಶ್ರೀ ಕ್ಷೇತ್ರ ಒಂಬತ್ತುಕೆರೆಯ ಮುಖ್ಯಸ್ಥ ಶರತ್ ಗಟ್ಟಿ ಒಂಬತ್ತುಕೆರೆ, ಆರ್ಟ್ ಆಫ್ ಲಿವಿಂಗ್‍ನ ಮುಖ್ಯಸ್ಥ ಕೆ.ವಿ. ಶೆಣೈ, ಸೂರ್ಯಪ್ರಕಾಶ್ ಪಕಳ, ಸದಾಶಿವ ಕಾಮತ್ ಹಾಗೂ ರಾಧಾ ಶೆಣೈ ಉಪಸ್ಥಿತರಿದ್ದರು.





