ಬಂಟ್ವಾಳ : ಡಿ. 7ರಂದು "ಹುಬ್ಬೂರಸೂಲ್ ಮೀಲಾದ್ ಸಂದೇಶ"
ಬಂಟ್ವಾಳ, ಡಿ.6: ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಶಾಂತಿಅಂಗಡಿ ವಲಯದ ವತಿಯಿಂದ ಡಿ. 7ರಂದು ರಾತ್ರಿ "ಹುಬ್ಬೂರಸೂಲ್ ಮೀಲಾದ್ ಸಂದೇಶ" ಕಾರ್ಯಕ್ರಮ ಶಾಂತಿ ಅಂಗಡಿ ಪರಿಸರದಲ್ಲಿ ನಡೆಯಲಿದೆ.
ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪಿಎಫ್‌ಐ ಬಿ.ಸಿ.ರೋಡು ವಲಯ ಅಧ್ಯಕ್ಷ ಇಮ್ತಿಯಾಝ್ ತುಂಬೆ ಅವರು "ಪ್ರೀಯಪೆಟ್ಟ ಉಮ್ಮ" ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡುವರು ಎಂದು ಪಿಎಫ್‌ಐ ಶಾಂತಿಅಂಗಡಿ ವಲಯದ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





