ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಮೂಡುಬಿದಿರೆ,ಡಿ.6: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ, ಪಿ.ಯು ಕಾಲೇಜು, ಹಿಫ್ಜ್ ಹಾಗೂ ಆಲಿಮ ಕೋರ್ಸ್‍ಗಳ ವಾರ್ಷಿಕ ಕ್ರೀಡಾಕೂಟವು ಡಿ.5 ಮತ್ತು 6 ರಂದು 3 ಪ್ರತ್ಯೇಕ ಮೈದಾನದಲ್ಲಿ ನಡೆಯಿತು.
ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅಕ್ರಮ ಸಕ್ರಮ ಮೂಡುಬಿದಿರೆ ವಲಯದ ಅಧ್ಯಕ್ಷರಾದ ಪಿ.ಕೆ.ಥೋಮಸ್ ಕ್ರೀಡಾಕೂಟದಲ್ಲಿ ಮಾನವೀಯತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂದು ಉದಾಹರಣೆಯ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಲಂಗಾರ್ ವಲಯದ ಕೌನ್ಸಿಲರಾದ ಮುಹಮ್ಮದ್ ಹನೀಫ್, ಟ್ರಸ್ಟಿಗಳಾದ ಮುಹಮ್ಮದ್ ಅಶ್ಫಾಕ್, ಯು.ಟಿ ಅಹ್ಮದ್ ಶರೀಫ್, ಆಡಳಿತಾಧಿಕಾರಿ ಮುಹಮ್ಮದ್ ಶಹಾಂ, ಅರೇಬಿಕ್ ವಿಭಾಗದ ಮುಖ್ಯಸ್ಥರಾದ ಅಬ್ದುಲ್ ಮುಸವ್ವಿರ್, ತಾಂತ್ರಿಕ ಆಡಳಿತಾಧಿಕಾರಿ ನೂರ್ ಮುಹಮ್ಮದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇೈರ್‍ಮ್ಯಾನ್ ಯು.ಎಂ. ಮೊಯ್ದಿನ್ ಕುಂಞಿ ವಹಿಸಿದ್ದರು.
ವಿದ್ಯಾರ್ಥಿಗಳ ಪೆರೇಡ್ ಹಾಗೂ ಡ್ರಿಲ್ ವಿಶೇಷ ಆಕರ್ಷಣೀಯವಾಗಿತ್ತು.ವಿದ್ಯಾರ್ಥಿನಿಯರ ಕ್ರೀಡಾಕೂಟದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ನಗರ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಹರಿಣಾಕ್ಷಿ ಸ್ವರ್ಣರವರು ನೆರವೇರಿಸಿದರು. ಹಾಗೂ ಕರಾಟೆ ತರಬೇತುಗಾರ್ತಿಯಾದ ಝಕ್ಯಾರವರು ಕ್ರೀಡಾ ಸ್ಪರ್ಧಿಯರನ್ನು ಹುರಿದುಂಬಿಸಿದರು.
ದ್ವಿತೀಯ ಪಿ.ಯು.ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸಫ್ವತ್ ನೌಶೀನ್ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿನಿಯಾದ ಅಫ್ರಾ ಸಲಾಂ ರ ಆಜ್ಞೆಯೊಂದಿಗೆ ಶಾಲಾ ವಿದ್ಯಾರ್ಥಿನಿಯರು ಪ್ರದರ್ಶನ ನಡಿಗೆಯನ್ನು ಒಂದೇ ವೇಗದಲ್ಲಿ, ಅದ್ಭುತವಾಗಿ ಪ್ರದರ್ಶಿಸಿದರು.
‘ವಿಜಯಿಗಳು ಮುನ್ನುಗ್ಗುವರು’ ಎಂಬ ಘೋಷಣೆ ವಾರ್ಷಿಕ ಕ್ರೀಡಾ ಕೂಟಕ್ಕೆ ನಾಂದಿಯಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯವರು, ಶಾಲೆಯ ಪ್ರಾಂಶುಪಾಲೆ ನರ್ಝಾನ, ಕಾಲೇಜಿನ ಪ್ರಾಂಶುಪಾಲೆ ಅಸ್ಮ ಸುಹಾ, ಉಪ ಪ್ರಾಂಶುಪಾಲೆ ಮುಹೀಮಾ ಖಾಲಿದ್ ಹಾಗೂ ಶಾಲಾ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.







