ಕೋಲಾರ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ
ಕೋಲಾರ, ಡಿ. 6: ಎ.ಐ.ಸಿ.ಸಿ ಛೇರ್ಮನ್ ಡಾ.ಕೆ.ರಾಜು, ಸಿ.ಡ್ಲ್ಯೂ.ಸಿ ಸದಸ್ಯರು ಹಾಗೂ ಲೋಕಸಭಾ ಸದಸ್ಯರಾದ ಡಾ.ಕೆ.ಹೆ.ಚ್.ಮುನಿಯಪ್ಪ, ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಎಫ್.ಹೆಚ್ ಜಕ್ಕಪ್ಪನವರ್, ಪರಿಶಿಷ್ಟ ವಿಭಾಗದ ಉಪಾಧ್ಯಕ್ಷ ಹೆಚ್.ವಿ ಕುಮಾರ್, ಕೆ.ಪಿ.ಸಿ.ಸಿ ರಾಜ್ಯ ಸಂಚಾಲಕ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕಾಂಗ್ರೇಸ್ ಸಮಿತಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿಯವರ ಶಿಪಾರಸ್ಸಿನ ಮೇರೆಗೆ ಕೋಲಾರ ಜಿಲ್ಲಾ 11 ಬ್ಲಾಕ್ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಕಾಂಗ್ರೇಸ್ ಎಸ್.ಸಿ.ವಿಭಾಗದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀನಿವಾಸಪುರ ನಗರ ಬ್ಲಾಕ್ ಅಧ್ಯಕ್ಷರಾಗಿ ರಾಮಮೂರ್ತಿ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ರವಣಪ್ಪ, ಮುಳಬಾಗಿಲು ಬ್ಲಾಕ್ ಅಧ್ಯಕ್ಷರಾಗಿ ಕಾರ್ ಶ್ರೀನಿವಾಸ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ವಿ.ಆಂಜಿನಪ್ಪ, ಕೆ.ಜಿ.ಎಫ್ ನಗರ ಬ್ಲಾಕ್ ಅಧ್ಯಕ್ಷರಾಗಿ ಗೋಪಿ, ಬೇತಮಂಗಲ ಬ್ಲಾಕ್ ಅಧ್ಯಕ್ಷರಾಗಿ ಜಿ.ಎಂ.ವೆಂಕಟೇಶಪ್ಪ, ಬಂಗಾರಪೇಟೆ ನಗರ ಬ್ಲಾಕ್ ಅಧ್ಯಕ್ಷರಾಗಿ
ಬಿ.ಪ್ರಸನ್ನಕುಮಾರ್, ಮಾಲೂರು ನಗರ ಬ್ಲಾಕ್ ಅಧ್ಯಕ್ಷರಾಗಿ ಎನ್.ಶೈಲ್‍ಕುಮಾರ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ಎ.ಎಂ.ನಾರಾಯಣಪ್ಪ, ಕೋಲಾರ ನಗರ ಬ್ಲಾಕ್ ಅಧ್ಯಕ್ಷರಾಗಿ ರಾಮಯ್ಯ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ಬೆಟ್ಟಹೊಸಪುರ ಬಿ.ಎಂ.ಮುನಿಯಪ್ಪ ರವರನ್ನು ನೇಮಕ ಮಾಡಲಾಗಿದೆ.
ಕೂಡಲೇ ಕಾಂಗ್ರೇಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಕಾಂಗ್ರೇಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ಜಯದೇವ್ ತಿಳಿಸಿದ್ದಾರೆ.







