ಚಿಕ್ಕಮಗಳೂರು : ಕಂದಕಕ್ಕೆ ಉರುಳಿ ಬಿದ್ದ ಲಾರಿ
ಚಿಕ್ಕಮಗಳೂರು, ಡಿ.6: ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿ ಬಿದ್ದ ಲಾರಿಯೊಂದು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಹುಲಿಹಳ್ಳ ಎಂಬಲ್ಲಿ ಬುಧವಾರ ನಡೆದಿದೆ.
ಟಿಂಬರ್ ತುಂಬಿಕೊಂಡು ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಿದ್ದ ಲಾರಿಯಲ್ಲಿದ್ದ ಚಾಲಕ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಂದಕದೊಳಗೆ ಉರುಳಿದ ರಭಸಕ್ಕೆ ಲಾರಿ ಸಂಪೂರ್ಣ ಪುಡಿ ಪುಡಿಯಾಗಿ ಹೋಗಿದೆ.
ಘಟನೆ ಕುರಿತು ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





