ಶಾಸಕ ವರ್ತೂರು ಪ್ರಕಾಶ್ ರಾಜೀನಾಮೆಗೆ ಒತ್ತಾಯ

ಕೋಲಾರ, ಡಿ. 6: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ವರ್ತೂರು ಪ್ರಕಾಶ್ ಅವರ ಪ್ರತಿಕೃತಿ ದಹನ ಮಾಡಿ ಅಂಬೇಡ್ಕರ್ ಸೇವಾ ಸಮಿತಿಯಿಂದ ನಗರದ ಮಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಿರಿಯ ರಾಜಕಾರಣಿ ಹಾಗೂ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿದ ಶಾಸಕರ ವರ್ತನೆ ಖಂಡನೀಯ ಈ ಕೂಡಲೇ ಶಾಸಕ ವರ್ತೂರು ಪ್ರಕಾಶ್ ರವರು ರಾಜೀನಾಮೆ ನೀಡಬೇಕು ಎಂದು ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ಅವರು ಆಗ್ರಹಿಸಿದರು.
ಈ ಸಂದಭರ್ದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಪಿಳ್ಳಪ್ಪ, ಕಾರ್ಯದರ್ಶಿ ಹರಟಿ ಸಂಪತ್, ಪ್ರಧಾನ ಕಾರ್ಯದರ್ಶಿ ಆಟೋ ರಾಜು, ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಮುನಿಯಪ್ಪ, ತೊರಲಕ್ಕಿ ನವೀನ್, ಕಾರ್ತಿಕ್, ಪ್ರಮೋದ್ ಹರಟಿ ಅಶೋಕ್ ಉಪಸ್ಥಿತರಿದ್ದರು.
Next Story





