ಡಿ.12:ಚಿನಾಲ ಚಿಗುರುಪಾದೆ ದಾರುನ್ನಜಾತ್ ಎಜ್ಯುಕೇಷನಲ್ ಸೆಂಟರ್ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್

ಮಂಜೇಶ್ವರ,ಡಿ.6 : ದಾರುನ್ನಜಾತ್ ಎಜ್ಯುಕೇಶನಲ್ ಸೆಂಟರ್ ಚಿನಾಲ, ಚಿಗುರುಪಾದೆ ಇದರ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಡಿ.12 ರಂದು ಮಂಗಳವಾರ ನಡೆಯಲಿದೆಯೆಂದು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 5 ಘಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಜಲಾಲುದ್ದೀನ್ ತಂಙಳ್ ಮಳ್‍ಹರ್ , ಶಿಹಾಬುದ್ದೀನ್ ತಂಙಳ್ , ಆಟ್ಟಕ್ಕೋಯ ತಂಙಳ್, ಉಮ್ಮರ್ ತಂಙಳ್ , ಹಬೀಬ್ ರಹ್ಮಾನ್ ತಂಙಳ್ , ಕೆ.ಎಸ್.ಎಂ ತಂಙಳ್ ಗಾಂಧೀ ನಗರ , ಮೊಯ್ದು ಸಅದಿ ಅಬ್ದುಲ್ ಖಾದರ್ ಸಖಾಫಿ ಉಪಸ್ತಿತರಿರುವರು. ಶಾಕಿರ್ ಬಾಖವಿ ಮಂಬಾಡ್ ಮುಖ್ಯ ಭಾಷಣ ಮಾಡಲಿದ್ದಾರೆ, ಸಂಜೆ 4.30 ಕ್ಕೆ ದಾರುನ್ನಜಾತ್ ನಿಂದ ಚಿಗುರುಪಾದೆ ತನಕ ಮೀಲಾದ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮೊಯ್ದು ಸಅದಿ , ಆಟ್ಟಕ್ಕೋಯ ತಂಙಳ್ , ಹಬೀಬ್ ರಹ್ಮಾನ್ , ಅಬ್ದುಲ್ ಖಾದರ್ ಸಖಾಫಿ , ಅಬ್ಬು ಕುಳಬೈಲು , ಹುಸೈನ್ ಮುಸ್ಲಿಯಾರ್ , ಅಬ್ದುಲ್ ರಹ್ಮಾನ್ ಮುಬಾರಕ್ ಉಪಸ್ಥಿತರಿದ್ದರು.
Next Story





