16 ವರ್ಷದೊಳಗಿನ ಬಾಲಕಿಯರ ರಾಜ್ಯ ಕ್ರಿಕೆಟ್ ತಂಡಕ್ಕೆ ಶಿಶಿರಾಗೌಡ ಆಯ್ಕೆ

ಚಿಕ್ಕಮಗಳೂರು, ಡಿ.7: ನಗರದ ಸಾಯಿ ಏಂಜೆಲ್ಸ್ ಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಶಿಶಿರಾಗೌಡ ಅವರು ರಾಜ್ಯ ಕ್ರಿಕೆಟ್ ತಂಡದ 16 ವರ್ಷದೊಳಗಿನ ಬಾಲಕಿಯರ ತಂಡಕ್ಕೆ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ನಾಲ್ಕು ವರ್ಷದಿಂದ 16 ವರ್ಷದೊಳಗಿನ ರಾಜ್ಯ ಕ್ರಿಕೇಟ್ ತಂಡದಲ್ಲಿ ಸ್ಥಾನ ಪಡೆಯುತ್ತಿರುವ ಶಿಶಿರಾ ಈ ಹಿಂದೆ 19 ವರ್ಷದೊಳಗಿನ ಬಾಲಕಿಯರ ರಾಜ್ಯ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿದ್ದರು. ಇವರು ನಗರದ ಡಾ.ಅಶ್ವಥ್ ಬಾಬು ಮತ್ತು ತ್ರಿವೇಣಿಯವರ ಪುತ್ರಿ.
Next Story





