ಶಾಸಕ ದತ್ತಾರವರ 3ನೇ ದಿನದ ಪಾದಯಾತ್ರೆ

ಕಡೂರು, ಡಿ.7: ಕಳೆದ 5ನೇ ತಾರೀಖಿನಿಂದ ಪಂಚನಹಳ್ಳಿ ಗ್ರಾಮದಿಂದ ಪ್ರಾರಂಭವಾದ ಪಾದಯಾತ್ರೆ ಬುಧವಾರ ರಾತ್ರಿ ಕಂಸಾಗರ ಗ್ರಾಮದಲ್ಲಿ ವಾಸ್ತವ್ಯ ಹೂಡಿ 3ನೇ ದಿನದ ಪಾದಯಾತ್ರೆಯನ್ನು ಇದೇ ಕಂಸಾಗರ ಗ್ರಾಮದಿಂದ ಪಾರಂಭಿಸಿದರು.
ಪಟ್ಟಣಗೆರೆ, ಜಿಗಣೇಹಳ್ಳಿ, ಬಿಸಲೆರೆ, ಸರಸ್ವತೀಪುರ, ಎಮ್ಮೆದೊಡ್ಡಿ ಗ್ರಾ.ಪಂ. ವ್ಯಾಪ್ತಿಯ ರೈತರೊಂದಿಗೆ ಸಭೆ ನಡೆಸಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಯಿತು. ನಂತರ ಪಾದಯಾತ್ರೆಯನ್ನು ರೈತರೊಂದಿಗೆ ಪ್ರಾರಂಭಿಸಿ ಸರಸ್ವತೀಪುರ, ಬಿಸಲೇಹಳ್ಳಿ ಗೇಟ್ ಬುಕ್ಕಸಾಗರ ಗೇಟ್ ಮೂಲಕ ಸಖರಾಯಪಟ್ಟಣ ಸಮೀಪದ ಆಂಜನೇಯ ದೇವಾಲಯದ ಆವರಣದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡರು.
ಸಖರಾಯಪಟ್ಟಣ ಸಮೀಪ ಹೊರವಲಯದಲ್ಲಿ ಪಾದಯಾತ್ರೆಯ ರೈತರೊಂದಿಗೆ ಊಟವನ್ನು ಸವಿದರು. ಸಖರಾಯಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಂತರ ಉದ್ದೆಬೋರನಹಳ್ಳಿ, ಲಕ್ಷ್ಮೀಪುರದ ಮೂಲಕ ಹಿರೇಗೌಜ ಗ್ರಾಮದವರೆಗೆ ಪಾದಯಾತ್ರೆಯನ್ನು ಮುಂದುವರೆಸಿ ಅದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು.
ಇವರೊಂದಿಗೆ ಕೋಡಿಹಳ್ಳಿ ಮಹೇಶ್ವರಪ್ಪ, ಎಂ. ರಾಜಪ್ಪ, ಶೂದ್ರ ಶ್ರೀನಿವಾಸ್, ಪುಟ್ಟೇಗೌಡ, ರೇವಣ್ಣ, ಲೋಕೇಶ್ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.







