ಡಿ. 8: ಯುನಿವೆಫ್ ವತಿಯಿಂದ ಪ್ರವಾದಿ ಸಂದೇಶ ಪ್ರಚಾರ ಅಭಿಯಾನ
ಮಂಗಳೂರು, ಡಿ. 7: ಯುನಿವೆಫ್ ಕರ್ನಾಟಕ ದ.ಕ. ಘಟಕದ ವತಿಯಿಂದ ಅರಿಯಿರಿ ಮನುಕುಲದ ಪ್ರವಾದಿಯನ್ನುಎಂಬ ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಉದ್ಘಾಟನಾ ಸಮಾರಂಭವು ಡಿ.8ರಂದು ಸಂಜೆ 6.30ಕ್ಕೆ ಕಂಕನಾಡಿ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ಜಗತ್ತಿನ ಹೃದಯ ಗೆದ್ದ ಮಮತೆಯ ಪ್ರವಾದಿ (ಸ)ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ ಪ್ರವಚನ ನೀಡಲಿರುವರು ಎಂದು ಯುನಿವೆಫ್ ಮಂಗಳೂರು ಶಾಖಾಧ್ಯಕ್ಷ ನೌಫಾಲ್ ಹಸನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Next Story





