ಡಿ.9: ಕೃಷ್ಣ ಮಠದಲ್ಲಿ ನಾಗಮಂಡಲೋತ್ಸವ
ಉಡುಪಿ, ಡಿ.7: ಪರ್ಯಾಯ ಶ್ರೀ ಪೇಜಾವರ ಮಠದ ಉಭಯ ಶ್ರೀಗಳ ಸಂಕಲ್ಪದಂತೆ ಶ್ರೀಕೃಷ್ಣ ಮಠದ ಶ್ರೀ ಸುಬ್ರಹ್ಮಣ್ಯದೇವರ ಸನ್ನಧಿಯಲ್ಲಿ ಡಿ.9ರ ರಾತ್ರಿ 8:30ಕ್ಕೆ ನಾಗಮಂಡಲೋತ್ಸವ ನಡೆಯಲಿದೆ.
ನಾಗಪಾತ್ರಿಗಳಾಗಿ ಸಗ್ರಿ ಗೋಪಾಲಕೃಷ್ಣ ಸಾಮಗ ಮತ್ತು ಡಕ್ಕೆ ಸೇವೆಯನ್ನು ಅಂಪಾರು ಬಾಲಕೃಷ್ಣ ವೈದ್ಯ ಬಳಗ ನಡೆಸಿಕೊಡಲಿದೆ. ಅಂದು ಅಪರಾಹ್ನ 12 ರಿಂದ ವಿಶೇಷ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ 6:30ಕ್ಕೆ ಹಾಲಿಟ್ಟು ಸೇವೆ ನಡೆಯಲಿದೆ ಎಂದು ಶ್ರೀಮಠದ ದಿವಾನರ ಪ್ರಕಟಣೆ ತಿಳಿಸಿದೆ.
Next Story





