ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಹುಚ್ಚಾಸ್ಪತ್ರೆಗೆ ಸೇರಲಿ : ಕೆ.ಜೆ.ಜಾರ್ಜ್

ಬೆಂಗಳೂರು, ಡಿ.7: ತಮ್ಮ ವಿರುದ್ಧ ನೂರಾರು ಕೋಟಿ ರೂ.ಮೌಲ್ಯದ ಸರಕಾರಿ ಭೂಮಿ ಕಬಳಿಕೆ ಆರೋಪ ಮಾಡಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಹುಚ್ಚಾಸ್ಪತ್ರೆಗೆ ಸೇರಲಿ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿರುಗೇಟು ನೀಡಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಜವಾಬ್ದಾರಿಯುತವಾಗಿ ಆರೋಪಿಸಿದರೆ ಉತ್ತರ ಕೊಡುತ್ತೇನೆ. ಆದರೆ, ನಿಮ್ಹಾನ್ಸ್‌ನಲ್ಲಿ ಇರಬೇಕಾದವರು ಬೀದಿಯಲ್ಲಿ ನಿಂತು ಮಾಡುವ ಆರೋಪಗಳಿಗೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದರು.
ತನ್ನ ವಿರುದ್ಧ ಅನಗತ್ಯ ಹಾಗೂ ಆಧಾರ ರಹಿತವಾದ ಆರೋಪಗಳನ್ನು ಮಾಡುತ್ತಿರುವ ಎನ್.ಆರ್.ರಮೇಶ್, ಹುಚ್ಚಾಸ್ಪತ್ರೆಗೆ ಹೋಗಿ ಸೇರಿಕೊಳ್ಳಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜಾರ್ಜ್, ನನ್ನ ವಿರುದ್ಧದ ಆರೋಪಗಳ ಬಗ್ಗೆ ತನಿಖೆಯಾಗಲಿ ಎಂದರು.
Next Story





