ಭಟ್ಕಳ: ಶ್ರೀ ಕ್ಷೇತ ಹಳೇಕೋಟೆ ಹನುಮಂತ ದೇವಸ್ಥಾನದ ನಿಧಿಕುಂಭ ಸ್ಥಾಪನೆ

ಭಟ್ಕಳ, ಡಿ. 7: ಇಲ್ಲಿನ ಸಾರದಹೊಳೆಯ ಶ್ರೀ ಕ್ಷೇತ ಹಳೇಕೋಟೆ ಹನುಮಂತ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ನಿಧಿಕುಂಬ ಸ್ಥಾಪನೆ ಕಾರ್ಯಕ್ರಮ ನಡೆಯಿತು.
ನಿಧಿಕುಂಭ ಸ್ಥಾಪನೆ ಕಾರ್ಯಕ್ರಮ ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ನೆರವೇರಿತು. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ದೇವಸ್ತಾನದ ನೂತನ ಕಟ್ಟಡದ ಗರ್ಭಗುಡಿಯ ನಿಧಿಕುಂಬ ಸ್ಥಾಪನೆಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.
ನಿದಿಕುಂಭದ ದಾರ್ಮಿಕ ಕಾರ್ಯಕ್ರಮವನ್ನು ಗೋಕರ್ಣದ ವೈದಿಕರಾದ ವೇದಮೂರ್ತಿ ಕೃಷ್ಣ ಭಟ್ಟರ ನೇತ್ರತ್ವದಲ್ಲಿ ನಡೆಯಿತು. ಶಿರಾಲಿ ಮುರುಡೇಶ್ವರರ ಭಾಗದ ನಾಮಧಾರಿ ಸಮಾಜದ ಸಾವಿರಾರು ಭಕ್ತರು ಈ ನಿಧಿಕುಂಭ ಕಾರ್ಯಕ್ರಮದಲ್ಲಿ ಹಾಜರಿದ್ದು ಶ್ರೀದೇವರ ಗರ್ಭಗುಡಿಯಲ್ಲಿ ಬಂಗಾರದ ನಾಣ್ಯಗಳನ್ನು ಹಾಕಿ ಪುನೀತರಾದರು. ದೇವಸ್ಥಾನನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಕೆ.ನಾಯ್ಕ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಶಾಸಕ ಮಂಕಾಳ ವೈದ್ಯ,ಮಾಜಿ ಶಾಸಕ ಜೆ.ಡಿ.ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಸುಬ್ರಾಯ ನಾಯ್ಕ, ಮಾಜಿ ಅಧ್ಯಕ್ಷ ಜೆ.ಜೆ.ನಾಯ್ಕ, ದೇವಸ್ಥಾನದ ಟ್ರಸ್ಟಿಗಳಾದ ರಾಮಾ ನಾಯ್ಕ ಪ್ರಮುಖರಾದ ನ್ಯಾಯವಾದಿ ಸಂತೋಷ ನಾಯ್ಕ, ಸುನೀಲ್ ನಾಯ್ಕ, ಈಶ್ವರ ನಾಯ್ಕ, ಶಂಕರ ನಾಯ್ಕ, ಭಟ್ಕಳ ನಾಮದಾರಿ ಗುರುಮಠದ ಅಧ್ಯಕ್ಷ ಎಂ.ಆರ್.ನಾಯ್ಕ ,ಶ್ರೀರಾಮಕ್ಷೇತ್ರದ ಟ್ರಸ್ಟಿ ಜೆ.ಎನ್.ನಾಯ್ಕ, ಭಟ್ಕಳ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.





