ಇನ್ನೂ 6 ವರ್ಷಗಳ ಅವಧಿಗೆ ಸ್ಪರ್ಧಿಸುವೆ: ಪುಟಿನ್
ಮಾಸ್ಕೊ, ಡಿ. 7: ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಇನ್ನೂ ಆರು ವರ್ಷಗಳ ಅವಧಿಗೆ ಸ್ಪರ್ಧಿಸುತ್ತೇನೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಹೇಳಿದ್ದಾರೆ.
ಇದು ಸಂಭವಿಸಿದರೆ, ಜೋಸೆಫ್ ಸ್ಟಾಲಿನ್ ಬಳಿಕ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿದ ರಶ್ಯದ ನಾಯಕ ಅವರಾಗಲಿದ್ದಾರೆ.
ಈಗಾಗಲೇ 18 ವರ್ಷಗಳಿಂದ ಅಧಿಕಾರದಲ್ಲಿರುವ ಪುಟಿನ್ ಚುನಾವಣೆಯಲ್ಲಿ ಸುಲಲಿತವಾಗಿ ಆಯ್ಕೆಯಾಗುತ್ತಾರೆಂದು ನಿರೀಕ್ಷಿಸಲಾಗಿದೆ.
Next Story