ಬೆಳ್ತಂಗಡಿ: ಮರದಿಂದ ಬಿದ್ದು ಮೃತ್ಯು
ಬೆಳ್ತಂಗಡಿ, ಡಿ. 7: ತೆಂಗಿನಕಾಯಿಗಳನ್ನು ಕೀಳುವಾಗ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಮಂಜೊಟ್ಟಿ ಕೊಲ್ಯೊಟ್ಟು ನಿವಾಸಿ ಲಸ್ರಾದೋ ಡಿಸೋಜ (58) ಎಂಬವರು ಮಧ್ಯಾಹ್ನ ತನ್ನ ತೋಟದಲ್ಲಿ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





