ಡಿ.9ರಂದು ಪಡೀಲ್‌ನಲ್ಲಿ ಮೀಲಾದ್ ಜಲ್ಸಾ, ಸ್ವಲಾತ್ ವಾರ್ಷಿಕ
ಮಂಗಳೂರು, ಡಿ.7: ಮಸ್ಜಿದುರ್ರಹ್ಮಾನ್ ಸುನ್ನೀ ಜಮಾಅತ್ ಪಡೀಲ್ ಇದರ ಆಶ್ರಯದಲ್ಲಿ ಡಿ.9ರಂದು ಸಂಜೆ 5:30ಕ್ಕೆ ಮೀಲಾದ್ ಜಲ್ಸಾ ಹಾಗೂ ಸ್ವಲಾತ್ ಮಜ್ಲಿಸ್ ನಡೆಯಲಿದೆ.
ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶೈಖುನಾ ಮಾಣಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಸಯ್ಯದ್ ಶಿಹಾಬುದ್ದೀನ್ ತಲಕ್ಕಿ ತಂಙಳ್ ಸ್ವಲಾತ್ ಮಜ್ಲಿಸ್‌ಗೆ ನೇತೃತ್ವ ನೀಡಲಿದ್ದಾರೆ.
ಉಮರುಲ್ ಫಾರೂಕ್ ಸಖಾಫಿ ಕೃಷ್ಣಾಪುರ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್ ಸುಧೀರ್ ಶೆಟ್ಟಿ, ಉದ್ಯಮಿ ಎಸ್.ಮುಹಮ್ಮದ್ ಹಾಜಿ ಕಣ್ಣೂರು ಭಾಗವಹಿಸಲಿದ್ದಾರೆ ಎಂದು ಮಸೀದಿ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕರಾವಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





