Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ:...

ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ: ಮಿಂಚಿದ ವಿರಾಟ್, ವಿಜಯ್, ಶಮಿ

ವಾರ್ತಾಭಾರತಿವಾರ್ತಾಭಾರತಿ7 Dec 2017 11:51 PM IST
share

ಹೊಸದಿಲ್ಲಿ, ಡಿ.7: ಮೂರನೇ ಟೆಸ್ಟ್ ಡ್ರಾಗೊಳ್ಳುವುದರೊಂದಿಗೆ ಬುಧವಾರ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೊನೆಗೊಂಡ ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಆಟಗಾರ ಮುರಳಿ ವಿಜಯ್ ಹಾಗೂ ವೇಗದ ಬೌಲರ್ ಮುಹಮ್ಮದ್ ಶಮಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

►ಟೆಸ್ಟ್ ಸರಣಿಯಲ್ಲಿ ಭಾರತದ ಆಟಗಾರರ ಸಾಧನೆಯ ಅವಲೋಕನ ಇಲ್ಲಿದೆ...

►ವಿರಾಟ್ ಕೊಹ್ಲಿ: 3 ಪಂದ್ಯ, 610 ರನ್, 243 ಗರಿಷ್ಠ ಸ್ಕೋರ್,3 ಶತಕ, 1 ಅರ್ಧಶತಕ.

ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ ಎರಡನೇ ಇನಿಂಗ್ಸ್ ನಲ್ಲಿ ಔಟಾಗದೇ 104 ರನ್ ಗಳಿಸಿ ಬೇಗನೇ ತಪ್ಪನ್ನು ತಿದ್ದಿಕೊಂಡರು. ನಾಗ್ಪುರ ಟೆಸ್ಟ್‌ನಲ್ಲಿ 213 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದ್ದ ಕೊಹ್ಲಿ ತವರುಪಟ್ಟಣ ದಿಲ್ಲಿಯಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ 243 ರನ್ ಗಳಿಸಿದರು.

►ಮುರಳಿ ವಿಜಯ್: 2 ಪಂದ್ಯ, 292 ರನ್, 155 ಗರಿಷ್ಠ ಸ್ಕೋರ್, 2 ಶತಕ.

ಕಳೆದ 5 ವರ್ಷಗಳಿಂದ ಭಾರತದ ಆರಂಭಿಕ ಆಟಗಾರನಾಗಿರುವ ಮುರಳಿ ವಿಜಯ್ ಶ್ರೀಲಂಕಾ ಸರಣಿಯಲ್ಲಿ ತಂಡಕ್ಕೆ ವಾಪಸಾಗಿದ್ದರು. ನಾಗ್ಪುರ ಟೆಸ್ಟ್‌ನಲ್ಲಿ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದ ವಿಜಯ್ 128 ರನ್ ಗಳಿಸಿದರು. ದಿಲ್ಲಿಯಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಆರಂಭಿಕ ಆಟಗಾರನಾಗಿ ಮುಂದುವರಿದ ವಿಜಯ್ ಮೊದಲ ಇನಿಂಗ್ಸ್‌ನಲ್ಲಿ 155 ರನ್ ಗಳಿಸಿದರು.

►ರೋಹಿತ್ ಶರ್ಮ: 2 ಪಂದ್ಯ,217 ರನ್, 102 ಗರಿಷ್ಠ ಸ್ಕೋರ್, 1 ಶತಕ, 2 ಅರ್ಧಶತಕ

2016ರ ಅಕ್ಟೋಬರ್‌ನ ಬಳಿಕ ನಾಗ್ಪುರದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ರೋಹಿತ್ ಶರ್ಮ ಅಜೇಯ 102 ರನ್ ಗಳಿಸಿದರು. 2013ರ ಬಳಿಕ ಮೊದಲ ಶತಕ ಸಿಡಿಸಿದರು. ದಿಲ್ಲಿ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್ ನಲ್ಲಿ 65 ಹಾಗೂ ಎರಡನೇ ಇನಿಂಗ್ಸ್ ನಲ್ಲಿ ಅಜೇಯ 50 ರನ್ ಗಳಿಸಿದ್ದರು.

►ಮುಹಮ್ಮದ್ ಶಮಿ: 2 ಪಂದ್ಯ, 9 ವಿಕೆಟ್‌ಗಳು, ಬೆಸ್ಟ್ ಬೌಲಿಂಗ್ 4/100.

ತವರು ಮೈದಾನ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬ್ಯಾಟ್ಸ್ ಮನ್‌ಗಳಿಗೆ ಸವಾಲಾಗಿದ್ದ ಶಮಿ ಬ್ಯಾಟಿಂಗ್‌ನಲ್ಲಿ 24 ಹಾಗೂ 12 ರನ್ ಕೊಡುಗೆ ನೀಡಿದ್ದರು. ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳನ್ನು ಕಬಳಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದಿದ್ದರು. ನಾಗ್ಪುರ ಪಂದ್ಯದಿಂದ ವಂಚಿತರಾಗಿದ್ದ ಶಮಿ ಕೋಟ್ಲಾ ಟೆಸ್ಟ್‌ಗೆ ತಂಡಕ್ಕೆ ವಾಪಸಾಗಿದ್ದರು. ಟೆಸ್ಟ್ ನ 2ನೇ ಹಾಗೂ 4ನೇ ದಿನದಾಟದಲ್ಲಿ ಉತ್ತಮ ಬೌಲಿಂಗ್‌ನಿಂದ ಲಂಕಾ ದಾಂಡಿಗರನ್ನು ಕಾಡಿದ್ದರು.

►ಚೇತೇಶ್ವರ ಪೂಜಾರ: 3 ಪಂದ್ಯ, 289 ರನ್, 143 ಗರಿಷ್ಠ ಸ್ಕೋರ್, 1 ಶತಕ, 1 ಅರ್ಧಶತಕ.

ಮಳೆ ಬಾಧಿತ ಮೊದಲ ಟೆಸ್ಟ್‌ನಲ್ಲಿ ಸಹ ಆಟಗಾರರು ಪೆವಿಲಿಯನ್‌ಗೆ ಪರೇಡ್ ನಡೆಸಿದ್ದರೆ, ಪೂಜಾರ ಮೊದಲ ಇನಿಂಗ್ಸ್‌ನಲ್ಲಿ 52 ರನ್ ಗಳಿಸಿ ತಂಡವನ್ನು ಆಧರಿಸಿದ್ದರು. ನಾಗ್ಪುರದಲ್ಲಿ ವಿಜಯ್ ಜೊತೆ 209 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದರು. ದಿಲ್ಲಿ ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ 23 ರನ್ ಗಳಿಸಿದ್ದ ಪೂಜಾರ 2ನೇ ಇನಿಂಗ್ಸ್ ನಲ್ಲಿ 49 ರನ್ ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟಿದ್ದರು.

►ಇಶಾಂತ್ ಶರ್ಮ: 2 ಪಂದ್ಯ, 8 ವಿಕೆಟ್, ಶ್ರೇಷ್ಠ ಬೌಲಿಂಗ್ 3/37

2015ರ ಆಗಸ್ಟ್‌ನ ಬಳಿಕ ನಾಗ್ಪುರದಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯ ಆಡಿದ್ದ ವೇಗಿ ಇಶಾಂತ್ ಶರ್ಮ ಲಯಕ್ಕೆ ಮರಳಿದರೆ ಎದುರಾಳಿಗೆ ಸವಾಲಾಗಬಲ್ಲೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಸಮರವಿಕ್ರಮ ಹಾಗೂ ಕರುಣರತ್ನೆ ವಿಕೆಟ್ ಕಬಳಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ತವರು ಅಂಗಣ ದಿಲ್ಲಿಯಲ್ಲಿ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದ ಇಶಾಂತ್ 2ನೇ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದರು.

►ಆರ್.ಅಶ್ವಿನ್ :3 ಪಂದ್ಯ, 12 ವಿಕೆಟ್, ಶ್ರೇಷ್ಠ ಬೌಲಿಂಗ್ 4/63

ಭಾರತದ ಪ್ರಮುಖ ಬೌಲರ್ ಅಶ್ವಿನ್ ಮೊದಲ ಟೆಸ್ಟ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದರು. ನಾಗ್ಪುರ ಟೆಸ್ಟ್‌ನಲ್ಲಿ ಒಟ್ಟು 8 ವಿಕೆಟ್ ಉರುಳಿಸಿದ ಅಶ್ವಿನ್ ವೇಗವಾಗಿ 300 ವಿಕೆಟ್ ಪೂರೈಸಿದ್ದರು.

►ರವೀಂದ್ರ ಜಡೇಜ: 3 ಪಂದ್ಯ, 10 ವಿಕೆಟ್, ಶ್ರೇಷ್ಠ ಬೌಲಿಂಗ್ 3-56

ಸರಣಿಯಲ್ಲಿ 10 ವಿಕೆಟ್‌ಗಳನ್ನು ಪಡೆದಿರುವ ಜಡೇಜ ಕೋಲ್ಕತಾದಲ್ಲಿ ಕೇವಲ 1 ಓವರ್ ಬೌಲಿಂಗ್ ಮಾಡಿದ್ದರು. ನಾಗ್ಪುರ ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ ಲಂಕಾದ ಮೂರು ಪ್ರಮುಖ ವಿಕೆಟ್ ಕಬಳಿಸಿದ್ದರು. 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದಿದ್ದರು. ದಿಲ್ಲಿ ಟೆಸ್ಟ್ ನಲ್ಲಿ ಒಟ್ಟು 5 ವಿಕೆಟ್ ಕಬಳಿಸಿ ಗಮನ ಸೆಳೆದರು.

►ಶಿಖರ್ ಧವನ್: 2 ಪಂದ್ಯ, 192 ರನ್, ಗರಿಷ್ಠ 94

 ಕೋಲ್ಕತಾದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಧವನ್ 2ನೇ ಇನಿಂಗ್ಸ್‌ನಲ್ಲಿ 116 ಎಸೆತಗಳಲ್ಲಿ 94 ರನ್ ಗಳಿಸಿದ್ದರು. ವೈಯಕ್ತಿಕ ಕಾರಣದಿಂದ 2ನೇ ಟೆಸ್ಟ್ ಪಂದ್ಯ ತಪ್ಪಿಸಿಕೊಂಡಿದ್ದ ಧವನ್ ದಿಲ್ಲಿಯಲ್ಲಿ ನಡೆದ 3ನೇ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X