ಮೌಂಟ್ ಕಾರ್ಮೆಲ್ ಶಾಲೆಯ ದಶಮಾನೋತ್ಸವ

ಮಂಗಳೂರು, ಡಿ.8: ಮೌಂಟ್ ಕಾರ್ಮೆಲ್ ಶಾಲೆಯ ದಶಮಾನೋತ್ಸವದ ಸಮಾರೋಪ ಸಮಾರಂಭ ಇತ್ತೀಚೆಗೆ ಜರಗಿತು.
ಆಪೋಸ್ತಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತ್ಯದ ಮುಖ್ಯಸ್ಥೆ ಭ. ಕಾರ್ಮೆಲ್ ರೀಟಾ ಎ.ಸಿ. ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹತ್ತು ವರ್ಷದ ಪ್ರಗತಿಯ ‘ಹೆಜ್ಜೆಗಳ ಸುರುಳಿ’ಯನ್ನು ಅಗಾತಮೇರಿ ಎ.ಸಿ. ಬಿಡುಗಡೆಗೊಳಿಸಿದರು. ಬೋಂದೆಲ್ ಚರ್ಚಿನ ಧರ್ಮಗುರು ಆಂಡ್ರು ಡಿಸೋಜ ಹಾಗೂ ಲಿಡಿಯಾ ಎ.ಸಿ. ಶುಭ ಹಾರೈಸಿದರು.
ದಶಮಾನೋತ್ಸವದ ಅಂಗವಾಗಿ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳು, ಬಾಸ್ಕೆಟ್ ಬಾಲ್ ಪಂದ್ಯಾಟ, ವಿಜ್ಞಾನ ಮಾದರಿಗಳ ಪ್ರದರ್ಶನ ಇತ್ಯಾದಿ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಶಾಲಾ ಪ್ರಗತಿಗೆ ಕ್ರಿಯಾತ್ಮಕವಾಗಿ ಶ್ರಮಿಸಿದ ಶಿಕ್ಷಕ ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು ಗೌರಸಲಾಯಿತು. ಪ್ರಾಂಶುಪಾಲೆ ಭ. ಮೆಲಿಸ್ಸಾ ಸ್ವಾಗತಿಸಿದರು. ಶಿಕ್ಷಕಿ ವಿದ್ಯಾ ರೈ ವಂದಿಸಿದರು.
Next Story





