ಆ್ಯಂಬುಲೆನ್ಸ್ ಸಿಗದೆ ಮಗಳ ಶವವನ್ನು ಬೈಕ್ ನಲ್ಲಿ ಸಾಗಿಸಿದ ತಂದೆ

ರಾಂಚಿ, ಡಿ.8: ಜಿಲ್ಲಾಸ್ಪತ್ರೆಯ ಆಡಳಿತ ವರ್ಗ ಆ್ಯಂಬುಲೆನ್ಸ್ ಒದಗಿಸಲು ನಿರಾಕರಿಸಿದ ಕಾರಣ ವ್ಯಕ್ತಿಯೋರ್ವ ತನ್ನ ಮಗಳ ಶವವನ್ನು ಮೋಟಾರ್ ಬೈಕ್‌ನಲ್ಲಿ ಸಾಗಿಸಿದ ಪ್ರಕರಣ ಜಾರ್ಖಂಡ್‌ನ ಗೊಡ್ಡಾ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಪೆಲಗರಿ ಗ್ರಾಮದ ನಿವಾಸಿ ಮಹಾದೇವ್ ಸಹಾ ಎಂಬಾತ ಹೃದ್ರೋಗದಿಂದ ಬಳಲುತ್ತಿದ್ದ ತನ್ನ 12ರ ಹರೆಯದ ಪುತ್ರಿ ಲಲಿತಾ ಕುಮಾರಿಯನ್ನು ಜಾರ್ಖಂಡ್‌ನ ಖ್ಯಾತ ಸದಾರ್ ಆಸ್ಪತ್ರೆಗೆ ಡಿ.6ರಂದು ಬೆಳಿಗ್ಗೆ ದಾಖಲಿಸಿದ್ದ. ಆದರೆ ಆ ದಿನವೇ ಲಲಿತಾ ಮೃತಪಟ್ಟಿದ್ದಳು. ಮಗಳ ಶವವನ್ನು ಮನೆಗೆ ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸುವಂತೆ ಮಹಾದೇವ್ ಮಾಡಿದ ಮನವಿಯನ್ನು ಆಸ್ಪತ್ರೆಯವರು ನಿರಾಕರಿಸಿದರು ಎನ್ನಲಾಗಿದ್ದು, ಬಳಿಕ ನಿರ್ವಾಹವಿಲ್ಲದೆ ಮಗಳ ಶವವನ್ನು ಬೈಕ್‌ನಲ್ಲಿಯೇ ಮನೆಗೆ ಸಾಗಿಸಿದ್ದಾನೆ ಎಂದು ವರದಿಯಾಗಿದೆ. ಆದರೆ ಮಹಾದೇವ್ ಸಹಾನ ಆರೋಪವನ್ನು ಆಸ್ಪತ್ರೆಯವರು ನಿರಾಕರಿಸಿದ್ದಾರೆ.
Next Story





