ಗಾಂಜಾ ಗಿಡವನ್ನು ಬೆಳೆದಿದ್ದ ಆರೋಪಿ ಬಂಧನ

ಕೊಳ್ಳೇಗಾಲ.ಡಿ.8: ಜಮೀನುನಲ್ಲಿ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿದ್ದ ಆರೋಪಿಯನ್ನು ಡಿವೈಎಸ್‍ಪಿ ಗುಪ್ತದಳ ತಂಡವೂಂದು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಜಾಗೇರಿಯ ಟಿ.ಜಿ ದೊಡ್ಡಿ ಗ್ರಾಮದ ಗುರುಸ್ವಾಮಿ(35) ಎಂಬಾತನು ಬಂಧಿತ ಆರೋಪಿ. ಸುಮಾರು ತನ್ನ ಜಮೀನಿನಲ್ಲಿ 106 ಕೆಜಿಗೂ ಹೆಚ್ಚು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಟಿ.ಜಿ ದೊಡ್ಡಿ ಗ್ರಾಮದಲ್ಲಿ ಅರಿಶಿನ ಬೆಳೆಯ ಮಧ್ಯದಲ್ಲಿ ಜೊತೆಗೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್‍ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆಯ ಎಸ್‍ಐ ವನರಾಜು, ಎಎಸ್‍ಐ ಚಲುವರಾಜು, ಪೇದೆಗಳಾದ ಗೋವಿಂದರಾಜು, ಶಂಕರ್, ಅಣ್ಣದೊರೈ, ಮಹೇಂದ್ರ, ರವಿ, ರಘು ಮತ್ತೀತರು ಇದ್ದರು.
Next Story





