Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಲೋಕಸಭೆಯತ್ತ ತಲೆಹಾಕಿ ಕೂಡ ಮಲಗುವುದಿಲ್ಲ:...

ಲೋಕಸಭೆಯತ್ತ ತಲೆಹಾಕಿ ಕೂಡ ಮಲಗುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಾರ್ತಾಭಾರತಿವಾರ್ತಾಭಾರತಿ8 Dec 2017 10:08 PM IST
share
ಲೋಕಸಭೆಯತ್ತ ತಲೆಹಾಕಿ ಕೂಡ ಮಲಗುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಡಿ. 8: ಲೋಕಸಭೆ ಎಂದರೆ ನನಗೆ ಭಯ, ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತ ನಾನು ಅತ್ತ ತಲೆಹಾಕಿ ಕೂಡ ಮಲಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕಲಾಮಂದಿರದಲ್ಲಿ ಶುಕ್ರವಾರ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಮೈಸೂರು-ಚಾಮರಾಜನಗರ ರಾಜಕೀಯ ಇತಿಹಾಸ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜಕೀಯ ಜೀವನದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದೇನೆ ಪ್ರಸ್ತುತ ಮುಖ್ಯಮಂತ್ರಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ ಲೋಕಸಭೆ ಎಂದರೆ ನನಗೆ ಭಯ ಅತ್ತ ತಲೆಹಾಕಿಕೂಡ ಮಲಗುವುದಿಲ್ಲ, ನಾನು 1981 ರಲ್ಲಿ ಮೊದಲ ಬಾರಿಗೆ ಲೋಕದಳ ಪಕ್ಷದಿಂದ ಮೈಸೂರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದೆ. ಚರಣ್ ಸಿಂಗ್ ನನಗೆ ಟಿಕೆಟ್ ನೀಡಿದ್ದರು. ನನ್ನ ಚುನಾವಣೆ ಖರ್ಚಿಗೆಂದು ಒಂದು ಲಕ್ಷ ಕೊಟ್ಟು ಕಳುಹಿಸಿದ್ದರು ಅದು ದೆಹಲಿಯಿಂದ ನನಗೆ ತಲುಪುವಷ್ಟರಲ್ಲಿ ಅರ್ಧ ಲಕ್ಷ ಆಗಿತ್ತು.  ಆ ಹಣವನ್ನು ಖರ್ಚುಮಾಡಿದೆ ಮತದಾನದ ಕಡೆಯ ಮೂರು ದಿನ ನನ್ನ ಬಳಿ ಹಣವಿಲ್ಲದೆ ನಾನು ಮತ್ತು ಪ್ರೊ.ಕೆ.ರಾಮದಾಸ್ ನಾಗರಹೊಳೆಯಲ್ಲಿ ಹೋಗಿ ಅವಿತುಕೊಂಡು ಕುಳಿತೆವು. ಆ ಚುನಾವಣೆಯಲ್ಲಿ ನಾನು ಸೋಲನ್ನು ಕಂಡೆ. ನಂತರ 1991 ರಲ್ಲಿ ಕೊಪ್ಪಳದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದೆ ಅಲ್ಲೂ ಸಹ ನನಗೆ ಸೋಲಾಯಿತು. ಹಾಗಾಗಿ ನನಗೆ ಲೋಕಸಭೆ ಎಂದರೆ ಭಯ ಇನ್ನೂ ಪ್ರಧಾನಿ ಎಂದರೆ ಇನ್ನು ಭಯ ಎಂದು ತಮ್ಮ ಗ್ರಾಮೀಣ ಶೈಲಿಯಲ್ಲೇ ಮಾತನಾಡಿದರು.

ಆಗಿನ ರಾಜಕೀಯವೇ ಬೇರೆ ಇತ್ತೀಚಿನ ರಾಜಕೀಯವೇ ಬೇರೆ ಎಂದ ಸಿಎಂ ಸಿದ್ದರಾಮಯ್ಯ, 1983ರಲ್ಲಿ ನಾನು ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದೆ. ಆಗ ಬರಿ 63 ಸಾವಿರ ಹಣ ಖರ್ಚು ಮಾಡಿದ್ದೆ. ಜಾರ್ಜ್‍ಫರ್ನಾಂಡಿಸ್ ಹತ್ತು ಸಾವಿರ ಕೊಟ್ಟಿದ್ದರು, ನನ್ನ ಗ್ರಾಮದವರು ಹತ್ತು ಸಾವಿರ ಹಣ ನೀಡಿದ್ದರು. ಇನ್ನೂ ಉಳಿದ ಹಣವನ್ನು ನಾನು ಪ್ರಚಾರಕ್ಕೆ ಹೋದಕಡೆಯಲ್ಲಿ ಜನರೇ ಎಲೆ ಅಡಿಕೆ ಹಾಕಿ ಹಣವನ್ನು ನೀಡಿದ್ದರು. ಇಂದು ಅಂತಹ ವಾತಾವರಣ ಇಲ್ಲ ಎಂದು ತಮ್ಮ ರಾಜಕೀಯ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೃಷ್ಣಕುಮಾರ್, ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವೆ ಗೀತಾ ಮಹದೇವಪ್ರಸಾದ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಬಿಡಿಎ ಅಧ್ಯಕ್ಷ ಕೆ.ವೆಂಕಟೇಶ್, ಸಂಸದ ಧ್ರುವನಾರಾಯಣ, ಶಾಸಕಾರದ ಜಿ.ಟಿ.ದೇವೇಗೌಡ, ವಾಸು, ಮಂಜುನಾಥ್, ಸಂದೇಶ್ ನಾಗರಾಜ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದೇವರಾಜ ಅರಸು ಮತ್ತು ನಾನು ಕಾಂಗ್ರೆಸ್ ಪಕ್ಷದಿಂದಲೇ ಮುಖ್ಯಮಂತ್ರಿಯಾಗಿರುವುದು ವಿಶೇಷ: ಸಿಎಂ

ದೇವರಾಜ ಅರಸು ಮತ್ತು ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಖ್ಯಮಂತ್ರಿ ಯಾಗಿರುವುದು ವಿಶೇಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.

ನಗರದ ಕಲಾಮಂದಿರದಲ್ಲಿ ಶುಕ್ರವಾರ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಮೈಸೂರು-ಚಾಮರಾಜನಗರ ರಾಜಕೀಯ ಇತಿಹಾಸ ಕೃತಿ ಬಿಡುಗೆಡೆ ಮಾಡಿ ಮಾತನಾಡಿದ ಅವರು, ಮೈಸೂರಿನಿಂದ ದೇವರಾಜ ಅರಸು ಮುಖ್ಯಮಂತ್ರಿ ಆದ ನಂತರ ನಾನು ಮುಖ್ಯಮಂತ್ರಿಯಾಗಿದ್ದೇನೆ. ಅಂದು ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದಿಂದಲೇ ಮುಖ್ಯಮಂತ್ರಿ ಆಗಿದ್ದರು. ಇಂದು ನಾನು ಸಹ ಕಾಂಗ್ರೆಸ್ ಪಕ್ಷದಿಂದಲೇ ಮುಖ್ಯಮಂತ್ರಿಯಾಗಿದ್ದೇನೆ. ನಾವಿಬ್ಬರೂ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿರುವುದು ವಿಶೇಷ ಎಂದರು.

ದೇವರಾಜ ಅರಸು ನಂತರ ಅಬ್ದುಲ್ ನಜೀರ್‍ಸಾಬ್, ಅಜೀಜ್ ಸೇಠ್, ನಾಗರತ್ನಮ್ಮ, ರಾಜಶೇಖರ ಮೂರ್ತಿ, ಸೇರಿದಂತೆ ಹಲವಾರು ಮಂದಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಸಾಮಥ್ರ್ಯ ಹೊಂದಿದ್ದರು. ಆದರೆ ಅವರ್ಯಾರಿಗೂ ಸಿಎಂ ಆಗುವ ಅವಕಾಶ ಸಿಗಲಿಲ್ಲ ಎಂದು ಹೇಳಿದರು.

ಜನರ ವಿಶ್ವಾಸ ಇದ್ದರೆ ಗೆಲುವು: ರಾಜಕೀಯದಲ್ಲಿ ಹಣಬಲ, ಜಾತಿ ವರ್ಚಸ್ಸು  ಗೆಲುವಿಗೆ ಕಾರಣವಾಗುವುದಿಲ್ಲ. ಜನರ ವಿಶ್ವಾಸ ಆತನ ಮೇಲೆ ಇರಬೇಕು ಅಂತಹವರು ಎಂತದೇ ಕ್ಷಿಷ್ಟ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧೆಮಾಡಿದರೂ ಗೆಲ್ಲಬಹುದು ಎಂದ ತಮ್ಮ ಅನುಭವವನ್ನು ಬಿಚ್ಚಿಟ್ಟರು.

ನನ್ನ ಜೀವನದ ಕೆಟ್ಟ ಚುನಾವೆಣೆ ಎಂದರೆ 2006 ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆ. ನನ್ನನ್ನು ಸೋಲಿಸಬೇಕು ಎಂದು ಬಹಳಷ್ಟು ಹಣ ಖರ್ಚುಮಾಡಿದರು. ಜೊತೆಗೆ ಆಡಳಿತ ಪಕ್ಷವೇ ನನ್ನ ವಿರುದ್ಧ ಬಂದು ಚುನಾವಣಾ ಪ್ರಚಾರಕ್ಕೆ ಇಳಿಯಿತು. ಆದರೆ ಜನರ ವಿಶ್ವಾಸಗಳಿಸಿದ್ದ ನನ್ನನ್ನು ಅವರು ಸೋಲಿಸಲು ಆಗಲಿಲ್ಲ. ಹಾಗಾಗಿ ಯಾರು ಎಷ್ಟೇ ಹಣ ಖರ್ಚು ಮಾಡಿದರು ಜನರ ವಿಶ್ವಾಸ ಇದ್ದರೆ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಚಾಮರಾಜನಗರಕ್ಕೆ ಹೋಗಿ ಸಿಎಂ ಖುರ್ಚಿ ಗಟ್ಟಿಯಾಯಿತು: ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಗಾದಿಯಿಂದ ಕೆಳಗೆ ಇಳಿಯ ಬೇಕಾಗುತ್ತದೆ ಎಂಬ ಭ್ರಮೆ ಎಲ್ಲಾ ಇತ್ತು. ಆದರೆ ನಾನು ಚಾಮರಾಜನಗರಕ್ಕೆ ಹೋದ ನಂತರ ನನ್ನ ಸಿಎಂ ಖುರ್ಚಿ ಇನ್ನೂ ಗಟ್ಟಿಯಾಯಿತು ಎಂದು ಹೇಳಿದರು.

ಜೆ.ಎಚ್.ಪಟೇಲ್ ಮುಖ್ಯಮಂತ್ರಿ, ನಾನು ಉಪಮುಖ್ಯಮಂತ್ರಿ ಚಾಮರಾಜನಗರ ವನ್ನು ಜಿಲ್ಲೆಯಾಗಿ ಘೋಷಿಸುವ ಸಂದರ್ಭದಲ್ಲಿ ಜೆ.ಎಚ್.ಪಟೇಲರು  ಮಲೈಮಹದೇಶ್ವರ ಬೆಟ್ಟಕ್ಕೆ ಹೋಗಿ ಘೋಷಿಸಿದ್ದರು. ಆದರ ನಾನು ಮುಖ್ಯಮಂತ್ರಿಯಾದ ನಂತರ ಸುಮಾರು ಏಳೆಂಟು ಬಾರಿ ಚಾಮರಾಜನಗರಕ್ಕೆ ಹೋಗಿ ಬಂದಿದ್ದೇನೆ. ಅಲ್ಲಿಗೆ ಹೋಗಿ ಬಂದ ನಂತರ ನನ್ನ ಮುಖ್ಯಮಂತ್ರಿ ಖುರ್ಚಿ ಇನ್ನೂ ಗಟ್ಟಿಯಾಯಿತು ಎಂದು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X