ಗಲಭೆ: ವ್ಯಕ್ತಿಯ ಶವ ಪತ್ತೆ

ಹೊನ್ನಾವರ, ಡಿ.8: ಪಟ್ಟಣದಲ್ಲಿ ಬುಧವಾರ ನಡೆದ ಗಲಭೆಯ ಸಂದರ್ಭದಲ್ಲಿ ನಾಪತ್ತೆಯಾದ ಪರೇಶ ಎಂಬ ಯುವಕನ ಶವ ಶುಕ್ರವಾರ ಬೆಳಗ್ಗೆ ಪಟ್ಟಣದ ಬಸ್ ನಿಲ್ದಾಣದ ಬಳಿಯ ಶೆಟ್ಟಿಕೆರೆಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನಾದ್ಯಂತ ಜನರು ಆಗಮಿಸುತ್ತಿದ್ದು, ಮತ್ತೆ ಉದ್ವಿಗ್ನ ಸ್ಥಿತಿಯುಂಟಾಗಿದೆ. ಗಲಭೆಯ ದಿನ ನಾಪತ್ತೆಯಾದ ಯುವಕನನ್ನು ಪತ್ತೆಹಚ್ಚಬೇಕು ಎಂದು ಪಟ್ಟಣದ ದುರ್ಗಾಕೇರಿಯ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ಬೆಳಗ್ಗೆ ಸಂಘಪರಿವಾರದ ಪ್ರಮುಖರು ಮತ್ತು ಸಾವಿರಾರು ಜನರು ಜಮಾವಣೆಗೊಂಡು ಧರಣಿ ನಡೆಸಿದ್ದರು.
ಈಗ ನಾಪತ್ತೆಯಾದವನ ಶವ ಸಿಕ್ಕಿರುವುದರಿಂದ ಮತ್ತೆ ಉದ್ವಿಗ್ನ ಪರಿಸ್ಥಿತಿಯುಂಟಾಗಿದ್ದು, ಶುಕ್ರವಾರವೂ ಹೊನ್ನಾವರ ಬಂದ್ ಆಗಿದ್ದು, ಅಂಗಡಿ-ಮುಂಗಟ್ಟುಗಳನ್ನು ತೆರೆಯಲಿಲ್ಲ.
Next Story





