ಯುವಕನ ವಿರುದ್ಧ ಅಪಹರಣ ಆರೋಪ: ದೂರು

ರಿಪ್ಪನ್‌ಪೇಟೆ, ಡಿ.8: ಸಮೀಪದ ಹರತಾಳು ನಿವಾಸಿ ಮಧುರಾ(16)ಎಂಬವರನ್ನು ಮಾರುತಿಪುರದ ಹರೀಶ ಎಂಬ ವ್ಯಕ್ತಿ ಅಪಹರಣ ಮಾಡಿದ್ದಾನೆಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ಮಂಜುನಾಥ ದೂರು ನೀಡಿದ್ದಾರೆ. ಆ. 7ರಂದು ಕಂಪ್ಯೂಟರ್ ತರಗತಿಗೆ ರಿಪ್ಪನ್‌ಪೇಟೆಗೆ ಹೋದವಳು ಮನೆಗೆ ಬಂದಿಲ್ಲವೆಂದು ಆ. 14 ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ತನಕ ಯಾವುದೇ ಸುಳಿವು ಸಿಗದ ಕಾರಣ ಪತ್ತೆ ಕಾರ್ಯ ನಡೆಸಲಾಗುತ್ತಿತ್ತು. ಈತನ ಬಗ್ಗೆ ಸುಳಿವು ಸಿಕ್ಕಿದಲ್ಲಿ ಠಾಣೆಗೆ 08185 242635 ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ.
Next Story





