ಶಿವಮೊಗ್ಗ: ವಿದ್ಯಾರ್ಥಿ ನಾಪತ್ತೆ
ಶಿವಮೊಗ್ಗ, ಡಿ.8: ನಗರದ ಹೊರವಲಯ ಪಿಇಎಎಸ್ ಇಂಜಿನಿಯರ್ ಕಾಲೇಜಿನ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಮೂಲತಃ ಬೀರೂರಿನ ನಿವಾಸಿ, ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಸಿ.ಎಸ್. ಅಮಿತ್ (18) ನಾಪತ್ತೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಕಾಲೇಜು ಹಾಸ್ಟೆಲ್‌ನಲ್ಲಿದ್ದು ಅಭ್ಯಾಸ ನಡೆಸುತ್ತಿದ್ದರು. ಹಾಸ್ಟೆಲ್ ಹೊರಭಾಗದಲ್ಲಿ ತಮ್ಮ ತಂದೆ ಬಂದಿದ್ದು, ಅವರನ್ನು ನೋಡಲು ಹೋಗುವುದಾಗಿ ಹಾಸ್ಟೆಲ್ ಕೊಠಡಿಯಿಂದ ಅಮಿತ್ ಹೊರ ತೆರಳಿದ್ದರು ಎನ್ನ ಲಾಗಿದೆ.
ಆದರೆ ನಂತರ ಅವರು ಕೊಠಡಿಗೆ ವಾಪಸಾಗದೆ ನಾಪತ್ತೆಯಾಗಿದ್ದರು. ಮೊಬೈಲ್ ಕೂಡ ಸ್ವಿಚ್‌ಆಫ್ ಆಗಿದ್ದು, ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿದ್ಯಾರ್ಥಿು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
Next Story





