ಉಚಿತ ಆರೋಗ್ಯ ಶಿಬಿರಗಳಿಂದ ಕಡು ಬಡವರು ನಿರಾಳ: ರಾಘವೇಂದ್ರ ತಳವಾರ್
►ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ. ►ಆರೋಗ್ಯ ರಕ್ಷಾ ಕಾರ್ಯಕಾರಿಣಿ ಸಭೆ.

ಚಳ್ಳಕೆರೆ, ಡಿ.8: ಕಡು ಬಡತನದಿಂದ ಸಾವಿರಾರು ಮಂದಿ ಉತ್ತಮ ಚಿಕಿತ್ಸೆ ಪಡೆದುಕೊಳ್ಳಲಾಗದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಗ್ರಾಮೀಣ ಹಾಗೂ ನಗರದ ಪ್ರದೇಶದ ಜನರು ಉಚಿತ ಆರೋಗ್ಯ ಶಿಬಿರಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಧಿಕಾರಿ ರಾಘವೇಂದ್ರ ತಳವಾರ್ ಕಿವಿಮಾತು ಹೇಳಿದ್ದಾರೆ.
ನಗರದ ಸಾರ್ವಾಜನಿಕ ಆಸ್ಪತ್ರೆಯಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ಮಹವೀರ ಭಗವಾನ್ ಜೈನ್ ಆಸ್ಪತ್ರೆ ಬೆಂ, ವಾಜಪೇಯಿ ಆರೋಗ್ಯ ಶ್ರೀ, ಸುಕ್ಷೇಮ ಆಸ್ಪತ್ರೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹೃದಯ, ಕಿಡ್ನಿ, ಕ್ಯಾನ್ಸ್‌ರ್ ನಂತಹ ಮಾರಕ ರೋಗಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಕಡು ಬಡವರು ಆರೋಗ್ಯ ಶಿಬಿರಗಳಿಂದ ನಿರಾಳರಾಗುತ್ತಿದ್ದು, ಸಂಸ್ಥೆಗಳ ಕಾರ್ಯ ಪ್ರಶಂಸನೀಯ. ಲಾಭ ಗಳಿಸುವುದಕ್ಕಿಂತ ಸೇವಾ ಮನೋಭಾವ ಹೆಚ್ಚಿರುವ ವೈದ್ಯರು ಸಮಾಜಕ್ಕೆ ವರದಾನ ಎಂದರು.
ಆರೋಗ್ಯ ಸುರಕ್ಷಾ ಟ್ರಸ್ಟ್ ವ್ಯಸ್ಥಾಪಕ ಡಾ. ಅಬ್ದುಲ್ ಮಾತನಾಡಿ, ದುಬಾರಿ ವೆಚ್ಚದ ಹಾಗೂ ಮಾರಣಾಂತಿಕ ಕಾಯಿಲೆಗಳಾದ ಹೃದಯ, ಕ್ಯಾನ್ಸ್‌ರ್, ನರರೋಗ, ಮೂತ್ರ ರೋಗ, ದೈಹಿಕ ಅಘಾತ ಸಂಬಂಧಿಸಿದ ಕಾಯಿಲೆಗಳ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗುವುದು. ರೋಗ ಲಕ್ಷಣಗಳು ಕಂಡಬಂದಲ್ಲಿ ತಕ್ಷಣ ವೈದ್ಯರನ್ನು ಭೆೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಶಿಬಿದಲ್ಲಿ ವಿವಿಧ ಗ್ರಾಮೀಣ ಭಾಗಗಳಿಂದ ಸುಮಾರು 200 ಮಂದಿ ಭಾಗವಹಿಸಿದ್ದರು. ಅಧುನಿಕ ತಂತ್ರಜ್ಞ್ಞಾನದಿಂದ ಕೂಡಿದ ಉಪಕರಣಗಳಿಂದ ರೋಗಿಗಳ ತಪಾಸಣೆ ಮಾಡಲಾಯಿತು, ಹೃದಯ ಸಂಬಂಧಿಸಿದ 16 ರೋಗಿಗಳಿಗೆ ಶಸ್ತ್ರಚಿಕಿತ್ಸೆ, ಮೂತ್ರರೋಗ ಸಂಬಂಧಿಸಿದ 2 ರೋಗಿಗಳನ್ನು ಪತ್ತೆ ಹಚ್ಚಿ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲು ಗುರುತಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಈಶ್ವರ್ ಪ್ರಸಾದ್, ಆಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ. ತಿಪ್ಪೇಸ್ವಾಮಿ, ಡಾ. ಬಸವರಾಜ್ ಹಿರೇಮಠ್, ಡಾ. ನಾಗರಾಜ್, ತಹಶೀಲ್ದಾರ್ ಟಿ.ಸಿ. ಕಾಂತರಾಜ್, ಸಿಪಿಐ ಎನ್. ತಿಮ್ಮಣ್ಣ, ಸುವರ್ಣ ಆರೋಗ್ಯ ಟ್ರಸ್ಟ್‌ನ ತಾಂತ್ರಿಕ ಸಿಬ್ಬಂದಿ ಸಲ್ಮಾ, ಭೀಮಣ್ಣ , ಬೆಸ್ಕಾಂ, ಲೋಕೋಪಯೋಗಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಆರೋಗ್ಯ ರಕ್ಷಾ ಕಾರ್ಯಕಾರಿಣಿ ಸಭೆ ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳಲ್ಲಿ ಹಾಸಿಗೆ, ಸೊಳ್ಳೆ ಪರದೆಗಳನ್ನು ಅಳವಡಿಸಿ, ರೋಗಿಗಳಿಗೆ ಅಗತ್ಯ ಸೇವೆಗಳನ್ನು ನೀಡಬೇಕು. ಉಳಿದಂತೆ ಸರಕಾರದಿಂದ ಬರುವ ಅನುದಾನದಲ್ಲಿ ಪೀಠೋಪಕರಣಗಳು, ಉಳಿದ ಸಾಮಗ್ರಿಗಳನ್ನು ಖರೀದಿಸಬೇಕು.
ರಾಘವೇಂದ್ರ ತಳವಾರ್, ಉಪವಿಭಾಗಧಿಕಾರಿ







