ನೀರು ದುರ್ಬಳಕೆ ತಡೆಯದಿದ್ದರೆ ಕಡೂರು ಬಂದ್‌ಗೆ ಕರೆ
ಕಡೂರು-ಬೀರೂರು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಶಿವಶಂಕರಪ್ಪ ಎಚ್ಚರಿಕೆ

ಕಡೂರು, ಡಿ.8: ಮದಗದ ಕೆರೆ ನೀರು ಕೆಲವು ಜನರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇತರರಿಗೆ ತೊಂದರೆಯಾಗುತ್ತಿದೆ. ಇದನ್ನು ತಾಲೂಕು ಆಡಳಿತ ನಿಯಂತ್ರಿಸದಿದ್ದರೆ ಕಡೂರು ಬಂದ್ ಮಾಡಲು ಕರೆ ನೀಡುವುದಾಗಿ ಕಡೂರು-ಬೀರೂರು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಆರ್. ಶಿವಶಂಕರಪ್ಪ ಎಚ್ಚರಿಕೆ ನೀಡಿದ್ದಾರೆ.
ಅವರು ಇಲ್ಲಿನ ತಾಲೂಕು ಕಚೇರಿ ಎದುರು ಅಡಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ರೈತರು ನಡೆಸಿದ ಹಗಲು-ರಾತ್ರಿ ನಿರಂತರ ಪ್ರತಿಭಟನೆಯಲ್ಲಿ ಮಾತನಾಡಿದರು. ಈ ಹಿಂದೆ ತಾಲೂಕು ಆಡಳಿತಕ್ಕೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ತಿಳಿಸಿ ಎಚ್ಚರಿಸಿ ಪ್ರತಿಭಟನೆ ನಡೆಸಲಾಗಿತ್ತು. ಮತ್ತು ಕಡೂರು ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ ಅಕ್ರಮವಾಗಿ ನೀರು ಬಳಸುತ್ತಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಅಡಿಕೆ ಬೆಳೆಗಾರ ಸಂಘದ ಮುಖಂಡ ಕೆ.ಎಚ್. ಶಂಕರ್, ಕೆ.ಎಚ್. ಲಕ್ಕಣ್ಣ, ನಲ್ಲೂರಿ ಮಂಜುನಾಥ್, ತೋಟದ ಮನೆ ಮೋಹನ್, ಲಕ್ಕಪ್ಪ, ತಿಪ್ಪೇಶ್ ಮತ್ತಿತರರಿದ್ದರು.
Next Story





