ಅಲ್ ಹಿಲಾಲ್ ಸಂಸ್ಥೆಯಿಂದ ಮಗ್ದೂಮ್ ಕಾಲನಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಭಟ್ಕಳ, ಡಿ. 8: ಪುರಸಭೆ ವ್ಯಾಪ್ತಿಯ ಮಗ್ದೂಮ್ ಕಾಲನಿಯಲ್ಲಿ ಅಲ್ ಹಿಲಾಲ್ ಅಸೋಸಿಯೇಶನ್ ನಿಂದ ಶುಕ್ರವಾರದಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಚ್ಛ ಮಗ್ದೂಮ್ ಯೋಜನೆಯಡಿ ಅಲ್ ಹಿಲಾಲ್ ಅಸೋಸಿಯೇಶನ್ ಸದಸ್ಯರು ಹಾಗೂ ಮೊಹಲ್ಲಾದ ಯುವಕರು ಪ್ರತಿ ಶುಕ್ರವಾರ ಮಗ್ದೂಮ್ ಕಾಲನಿಯನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಗೈಗೆತ್ತಿಕೊಳ್ಳಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಶಬ್ಬಿರ್ ಗಂಗೋಳಿ ತಿಳಿಸಿದ್ದಾರೆ.
ಮೊಹಲ್ಲಾದ ಪ್ರತಿಯೊಂದು ಮನೆಯ ಎದರು ಇರುವ ಗಿಡಕಂಟಿಗಳನ್ನು ಸ್ವಚ್ಛಗೊಳಿಸಿವುದು, ಜನರಲ್ಲಿ ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮಾಧ್ಯಮಗಳಿಗೆ ಅವರು ತಿಳಿಸಿದ್ದಾರೆ. ಈ ಸಂದರ್ಭ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಂ ಕೆ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Next Story





