ಆಯುರ್ವೇದದಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮವಿಲ್ಲ: ಸಂಸದ ಎಂ.ಚಂದ್ರಪ್ಪ
ರಾಷ್ಟ್ರಮಟ್ಟದ ಸೆಮಿನಾರ್ ಕಾರ್ಯಕ್ರಮ

ಚಳ್ಳಕೆರೆ, ಡಿ.8: ನೂರಾರು ವರ್ಷಗಳ ಇತಿಹಾಸ ವಿರುವ ಆಯುರ್ವೇದ ಚಿಕಿತ್ಸಾ ಪದ್ಧ್ದತಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಮಾರಕ ಕಾಯಿ ಲೆಗಳಿಂದ ಗುಣ ಮುಖರಾಗಬಹುದು ಎಂದು ಸಂಸದ ಎಂ.ಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಪೂಜಿ ಆಯುರ್ವೇದಿಕ್ ಮಲ್ಟಿ ಆಸ್ಪತ್ರೆ ಹಾಗೂ ಬಾಪೂಜಿ ಆಯುರ್ವೇದ ಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ಕ್ಯಾನ್ಸರ್ ರೋಗಗಳ ಆಯುರ್ವೇದ ಚಿಕಿತ್ಸಾ ವಿಧಾನಗಳ ರಾಷ್ಟ್ರಮಟ್ಟದ ಸೆಮಿನಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ವಿದೇಶಿ ಚಿಕಿತ್ಸೆ ಹಾಗೂ ಔಷಧಿಗಳ ಮಾರು ಹೋಗಿ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ ಆದ್ದರಿಂದ ತಲ ತಲಾಂತರದಿಂದ ರೂಡಿಯಲ್ಲಿರುವ ಆಯುರ್ವೇದ ಚಿಕಿತ್ಸೆ ಪಡೆದರೆ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾವಿಲ್ಲದೆ ಮಾರಕ ಕಾಯಿಲೆಗಳಿಂದ ದೂರು ಉಳಿಯಲು ಸಾಧ್ಯ ಆದ್ದರಿಂದ ಆಯುರ್ವೇದ ಪದ್ಧತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಎಂದು ಆಯುರ್ವೇದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ವಿವಿಧ ್ಯಾನ್ಸರ್ ಕಾಯಿಲೆಗಳಿಗೆ ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದು ಸಾರ್ವಜನಿಕರು ಆಯು ರ್ವೇದ ಚಿಕಿತ್ಸಾ ಪದ್ಧ್ದತಿ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾರದಾಶ್ರಮದ ತ್ಯಾಗಿಮಹಿಮಾತ, ಸಂಸ್ಥೆಯ ಕಾರ್ಯದರ್ಶಿ ಎಂ. ಜಗದೀಶ್, ಆಡಳಿತಾಧಿಕಾರಿ ಬಾಲರೆಡ್ಡಿ, ಮಾತನಾಡಿದರು ಸಿಸಿಐಎಂ ಸದಸ್ಯ ಡಾ.ಶ್ರೀನಿವಾಸ್ ಕೆ.ಬನ್ನಿಗೋಳ್ ದೆಹಲಿ, ಸಿಸಿಐಎಂ ಸದಸ್ಯ ಡಾ.ಬಿ.ಆರ್.ರಾಮಕೃಷ್ಣ ವಿಶೇಷ ಉಪನ್ಯಾಸ ನೀಡಿ ದರು. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಸಿ.ಟ.ಬಸವರಾಜ್, ಕಾರ್ಯದರ್ಶಿ ಡಾ. ಮಮತಾ ಭಗವತ್, ಡಾ.ಸತ್ಯನಾರಯಣ, ಡಾ.ಅಕ್ಷಯ್, ಡಾ.ರಂಜಿತ್,ಡಾ.ರೂಪ, ಡಾ.ರಾಮರಾಜು, ಡಾ.ಸುನಿಲ್‌ಕುಮಾರ್, ಜಿಲ್ಲಾ ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್‌ರೆಡ್ಡಿ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ರಾಜ್ಯದ ವಿವಿಧ 14 ಆಯುರ್ವೇದ ಮೆಡಿಕಲ್ ಕಾಲೇಜಿನಿಂದ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







