ಹಾಕಿ: ಸೆಮಿಫೈನಲ್ನಲ್ಲಿ ಮುಗ್ಗರಿಸಿದ ಭಾರತ
ಭುವನೇಶ್ವರ, ಡಿ.8: ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯ ಸೆಮಿ ಫೈನಲ್ನಲ್ಲಿ ಆತಿಥೇಯ ಭಾರತ ತಂಡ ಅರ್ಜೆಂಟೀನದ ವಿರುದ್ಧ 1-0 ಅಂತರದಿಂದ ಸೋತಿದೆ. ಈ ಗೆಲುವಿನ ಮೂಲಕ ಅರ್ಜೆಂಟೀನ ಇದೇ ಮೊದಲ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಅಂತಿಮ-4ರ ಪಂದ್ಯದಲ್ಲಿ ಅರ್ಜೆಂಟೀನದ ಗೊಂಝಾಲೊ ಪಿಲಟ್ 17ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಅರ್ಜೆಂಟೀನ ತಂಡ ಪ್ರತಿಕೂಲ ಹವಾಗುಣಕ್ಕೆ ಭಾರತಕ್ಕೆ ಹೆಚ್ಚು ಉತ್ತಮವಾಗಿ ಹೊಂದಿಕೊಂಡಿತು. ಹಲವು ಅವಕಾಶ ಸೃಷ್ಟಿಸಿದ ಒಲಿಂಪಿಕ್ಸ್ ಚಾಂಪಿಯನ್ ತಂಡ 17ನೇ ನಿಮಿಷದಲ್ಲಿ ತನಗೆ ಲಭಿಸಿದ ಮೊದಲ ಪೆನಾಲ್ಟಿ ಕಾರ್ನರ್ನ್ನು ಗೋಲಾಗಿ ಪರಿವರ್ತಿಸಿಕೊಳ್ಳಲು ಯಶಸ್ವಿಯಾಯಿತು. ಗೋಲ್ಕೀಪರ್ ಆಕಾಶ್ ಚೆಕ್ಟೆ ಅವರನ್ನು ವಂಚಿಸಿದ ಗೊಂಝಾಲೊ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.
Next Story