ಉಡುಪಿಯಲ್ಲಿ ‘ಐಸಿರಿ ಭಕ್ತಿ’ ಚಾನೆಲ್ ಪ್ರಸಾರ ಆರಂಭ
ಉಡುಪಿ, ಡಿ.9: ಕನ್ನಡದ ಮೊದಲ ಭಕ್ತಿ ಚಾನೆಲ್ ‘ಐಸಿರಿ ಭಕ್ತಿ’ ಉಡುಪಿ ಯಲ್ಲಿ ಪ್ರಸಾರ ಆರಂಭಿಸಲಿದೆ ಎಂದು ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ರವಿಶಂಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬ್ರಹ್ಮಾವರ, ಕುಂದಾಪುರ, ಬೈಂದೂರು, ಕೊಲ್ಲೂರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಭಾಗಗಳಲ್ಲಿ ಡೆನ್ ಕೇಬಲ್ ವೀಕ್ಷಕರಿಗೆ ಐಸಿರಿ ಭಕ್ತಿ ಚಾಲನೆ 896 ಲಭ್ಯವಾಗಲಿದೆ ಎಂದರು.
ರಾಜ್ಯಾದ್ಯಂತ ಈಗಾಗಲೇ ಐಸಿರಿ ಭಕ್ತಿ ಚಾನೆಲ್ ಹಾಥ್‌ವೇ, ಇನ್ ಡಿಜಿ ಟಲ್, ಇಡಿಜಿಟಲ್, ಆಕ್ಟ್ ಕೇಬಲ್‌ಗಳ ಮೂಲಕ ಸುಮಾರು 1.25ಕೋಟಿ ವೀಕ್ಷಕರನ್ನು ಹೊಂದಿದೆ. ದಿನದ 24ಗಂಟೆಯೂ ಭಕ್ತಿ, ಸಂಸ್ಕೃತಿಯ ಕಾರ್ಯಕ್ರಮ ಗಳು ಈ ಚಾಲೆನ್‌ನಲ್ಲಿ ಪ್ರಸಾರಗೊಳ್ಳುತ್ತದೆ. ಪರ್ಯಾಯೋತ್ಸವದ ಸಂದರ್ಭ ದಲ್ಲಿ ಉಡುಪಿಯನ್ನು ನಾಡಿಗೆ ಪರಿಚಯಿಸುವ ಕಾರ್ಯವನ್ನೂ ಚಾನೆಲ್ ಮಾಡಲಿದೆ ಎಂದು ಅವರು ಹೇಳಿದರು.
ಈ ವಾಹಿನಿಯು ರಾಜ್ಯಾದ್ಯಂತ ಐಸಿರಿ ಭಕ್ತಿ ಬಳಗವನ್ನು ಆರಂಭಿಸಿದ್ದು, ಮುಂದಿನ ತಿಂಗಳು ಉಡುಪಿಯಲ್ಲಿ ಈ ಬಳಗಕ್ಕೆ ಚಾಲನೆ ನೀಡಲಾಗುವುದು. ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಈ ಬಳಗವನ್ನು ಉದ್ಘಾಟಿಸಲಿರು ವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ವೆಂಕಟರಾಜ ಭಟ್, ಆನಗಳ್ಳಿ ಕರು ಣಾಕರ ಹೆಗಡೆ, ಬಳಗದ ಸಂಚಾಲಕ ಗೋಪಾಡಿ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.





