ಅಗ್ರಹಾರದಲ್ಲಿ ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ಪ್ರತಿಭೋತ್ಸವ
ಬಂಟ್ವಾಳ, ಡಿ. 9: ಕರ್ನಾಟಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಬಂಟ್ವಾಳ ಸೆಕ್ಟರ್ "ಪ್ರತಿಭೋತ್ಸವ-2017" ಕಾರ್ಯಕ್ರಮವು ಡಿ. 10ರಂದು ಅಗ್ರಹಾರ-ಕೊಪ್ಪಳ ಸೈಯದ್ ತ್ವಾಹಿರುಲ್ ಅಹ್ದಲ್ ತಂಙಳ್ ವೇದಿಕೆಯಲ್ಲಿ ನಡೆಯಲಿದೆ.
ಪ್ರತಿಭೋತ್ಸವ ಸಮಿತಿ ಚೆಯರ್‌ಮೆನ್ ಪಿ.ಎ. ಅಬ್ದುಲ್ ಅಝೀಝ್ ಸಅದಿ ಅಗ್ರಹಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಎಸ್ಸೆಸ್ಸೆಫ್ ಬಂಟ್ವಾಳ ಘಕಟ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ವಗ್ಗ ಉದ್ಘಾಟಿಸುವರು.
ಬೆಳಗ್ಗೆ 9.15ರಿಂದ ಸಂಜೆ 4ರತನಕ ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಎಸ್ಸೆಸ್ಸೆಫ್ ಪ್ರಕಟಣೆ ತಿಳಿಸಿದೆ.
Next Story





