ಟಾಟಾ ಏಸ್ ಆಟೋ ಮತ್ತು ಸ್ಕೂಟರ್ ನಡುವೆ ಡಿಕ್ಕಿ: ತಂದೆ ಮಗ ಸಾವು

ಮೈಸೂರು,ಡಿ.9: ಟಾಟಾ ಎಸ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ಬನ್ನೂರು ಸಮೀಪದ ಚಾಮನಹಳ್ಳಿ ಬಳಿ ನಡೆದಿದೆ.
ಬಾಣಸವಾಡಿ ಗ್ರಾಮದ ಸಿದ್ದಶೆಟ್ಟಿ(60), ಪುತ್ರ ಮಹೇಂದ್ರ(30) ಸಾವನ್ನಪ್ಪಿರುವವರು. ಬನ್ನೂರು ಪಟ್ಟಣದ ಎಪಿಎಂಸಿ ಯಾರ್ಡ್ ಗೆ ಟಾಟಾ ಏಸ್‍ನಲ್ಲಿ ಟೊಮೆಟೋ ತೆಗೆದುಕೊಂಡು ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಸ್ಕೂಟರ್‍ನಲ್ಲಿ ಬಾಣಸವಾಡಿಯಿಂದ ಬನ್ನೂರು ಕಡೆಗೆ ಬರುತ್ತಿದ್ದ ಮಹೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆತನ ತಂದೆ ಸಿದ್ದಶೆಟ್ಟಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





