ಮಂಗಳೂರು: 'ವೆಸ್ಟ್‌ಲೈನ್ ಸ್ಪ್ಲೆಂಡಿಡ್' ವಸತಿ ಸಮುಚ್ಚಯ ಉದ್ಘಾಟನೆ

ಮಂಗಳೂರು, ಡಿ. 9: ವೆಸ್ಟ್‌ಲೈನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ವೆಸ್ಟ್‌ಲೈನ್ ಸ್ಪ್ಲೆಂಡಿಡ್ ಹೋಮ್ಸ್ ಅನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಕುಲಶೇಖರ ಸಿಕ್ವೇರಾ ಲೇನ್‌ನಲ್ಲಿ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಈ ಯೋಜನೆಯ ಪ್ರವರ್ತಕ ಸಹೋದರರಾದ ನಾಸಿರ್ ಮತ್ತು ಯಾಸಿರ್ ಕ್ರಿಯಾಶೀಲ ಮತ್ತು ವಿನೂತನ ಯೋಚನೆಗಳನ್ನು ಹೊಂದಿದ ಯುವಕರಾಗಿದ್ದು, ತೀರಾ ಆತ್ಮೀಯರು. ಕಳೆದ ಕೆಲ ವರ್ಷಗಳಿಂದ ಅವರ ಬೆಳವಣಿಗೆಯನ್ನು ನಿಕಟವಾಗಿ ನೋಡುತ್ತಾ ಬಂದಿದ್ದೇನೆ. ಸಮಾನತೆ, ಕೈಗೆಟುಕುವ ದರ, ವಿತರಣೆ ಬಗೆಗಿನ ಅವರ ಬದ್ಧತೆ ಅಮೋಘ. ಅವರು ಸ್ಪ್ಲೆಂಡಿಡ್ ಹೋಮ್ಸ್‌ಗೆ ನಿಗದಿಪಡಿಸಿರುವ ದರ ಹಾಗೂ ಗುಣಮಟ್ಟ ಅದ್ಭುತವಾದದ್ದು" ಎಂದು ಬಣ್ಣಿಸಿದರು.
ವಕ್ಫ್‌ಬೋರ್ಡ್ ಮಾಜಿ ಅಧ್ಯಕ್ಷ ಮತ್ತು ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಶೀದ್ ಹಾಜಿ ಮಾತನಾಡಿ, "ನನ್ನ ಅಳಿಯ ಮತ್ತು ಪ್ರವರ್ತಕ ಮಿತವ್ಯಯದ ಅಪಾರ್ಟ್‌ಮೆಂಟ್ ನಿರ್ಮಿಸಿದ್ದನ್ನು ನಾನು ಗಮನಿಸಿದ್ದೇನೆ. ಆದರೆ ಅಚ್ಚರಿಯೆಂದರೆ ಇದು ಐಷಾರಾಮಿ ಅಪಾರ್ಟ್‌ಮೆಂಟ್‌ಗಿಂತ ಏನೂ ಕಡಿಮೆ ಇಲ್ಲ. ಎರಡು ಹೈ ಎಂಡ್ ಲಿಫ್ಟ್, ಸ್ವಿಮ್ಮಿಂಗ್ ಪೂಲ್, ವ್ಯೆಪಾಯಿಂಟ್ ಹಾಗೂ ಸುಂದರವಾಗಿ ನಿರ್ಮಿಸಿದ ಕ್ಲಬ್‌ಹೌಸ್ ಇಲ್ಲಿದೆ. ಮಿತವೆಚ್ಚದಲ್ಲಿ ವೆಸ್ಟ್‌ಲೈನ್ ಸ್ಪ್ಲೆಂಡಿಡ್ ಹೋಮ್ಸ್ ಖರೀದಿಸಿದ ಮಾಲಕರಿಗೆ ನಾನು ಅಭಿನಂದನೆ ಸಲ್ಲಿಸಬಯಸುತ್ತೇನೆ, ವೆಸ್ಟ್‌ಲೈನ್ ಇದೀಗ ಗುಣಮಟ್ಟ ಮತ್ತು ವಿನ್ಯಾಸಕ್ಕೆ ಮತ್ತೊಂದು ಹೆಸರಾಗಿದೆ. ಅತ್ಯಾಕರ್ಷಕ ಹಾಗೂ ಸುಂದರವಾಗಿ ಇದನ್ನು ನಿರ್ಮಿಸಿದ್ದು, ಗ್ರಾಹಕರಿಗೆ ಭರವಸೆ ನೀಡಿದ್ದಕ್ಕಿಂತ ಉತ್ತಮವಾದುದನ್ನು ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಸಂಸದ ಬಿ. ಇಬ್ರಾಹಿಂ ಮಾತನಾಡಿ, "ವೆಸ್ಟ್‌ಲೈನ್ ಬಿಲ್ಡರ್ಸ್‌ನ ಮಿತವ್ಯಯದ ಅಪಾರ್ಟ್‌ಮೆಂಟ್ ಪರಿಕಲ್ಪನೆ ಅದ್ಭುತ ಹಾಗೂ ಸುಂದರವಾಗಿ ಮೂಡಿಬಂದಿದೆ. ಬಜೆಟ್ ಜನರಿಗೆ ಮೆಚ್ಚುಗೆಯಾಗುವಂತಿದ್ದರೆ, ಐಷಾರಾಮಿ ಯೋಜನೆಗಳಿಗೆ ಇವರು ಎಂಥ ಅದ್ಭುತವಾದುದನ್ನು ನೀಡಬಹುದು? ಇಂಥ ಸೂಪರ್ ಲಕ್ಷುರಿ ಗಗನಚುಂಬಿ ಕಟ್ಟಡವನ್ನು ವೆಸ್ಟ್‌ಲೈನ್ ನಿರ್ಮಿಸುತ್ತಿದೆ. ಇದು ದಕ್ಷಿಣ ಭಾರತದ ಅತಿ ಎತ್ತರದ ಗೋಪುರ ಎನಿಸಿಕೊಂಡಿದೆ. ಈ ಯೋಜನೆ ಅತ್ಯುತ್ತಮವಾಗಲಿ ಹಾಗೂ ಅದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದರು.
ಪಾಲಿಕೆ ಸದಸ್ಯ ಭಾಸ್ಕರ ಮೊಯಿಲಿ, ಕೆಳ ಅಂತಸ್ತಿನ ಒಳಾಂಗಣ ಕ್ರೀಡಾಂಗಣ ಮತ್ತು ಈಜುಕೊಳ ಸೌಲಭ್ಯವನ್ನು ಉದ್ಘಾಟಿಸಿದರು. ಭವಿಷ್ಯದ ಯೋಜನೆಗಳಿಗೆ ತಂಡಕ್ಕೆ ಶುಭ ಹಾರೈಸಿದರು.
ವೆಸ್ಟ್‌ಲೈನ್ ಸಮೂಹದ ಆಡಳಿತ ನಿರ್ದೇಶಕ ನಾಸಿರ್ ಮೊಹಿದ್ದೀನ್ ಮಾತನಾಡಿ, "ವೆಸ್ಟ್‌ಲೈನ್ ಇಂದು ಈ ಹಂತಕ್ಕೆ ಬಂದಿರುವುದು ಖಂಡಿತವಾಗಿಯೂ ಇಡೀ ತಂಡದ ಕಠಿಣ ಪರಿಶ್ರಮದಿಂದ. ದೇವರು ನಮಗೆ ಬದ್ಧತೆಯ ಹಾಗೂ ಅದ್ಭುತ ವ್ಯಕ್ತಿಗಳನ್ನು ಕರುಣಿಸಿದ್ದಾನೆ. ಆರಂಭದಲ್ಲೇ ನಮ್ಮಲ್ಲಿ ಸೇರ್ಪಡೆಯಾದ ಬಹಳಷ್ಟು ಸಿಬ್ಬಂದಿ ಇಂದಿಗೂ ನಮ್ಮೊಂದಿಗೆ ಇದ್ದಾರೆ. ಈ ತಂಡಕ್ಕೆ ಗುಣಮಟ್ಟದ ಪ್ರಜ್ಞೆ ಪ್ರತಿ ಹಂತದಲ್ಲೂ ಇದ್ದು, ಅವರ ಕಠಿಣ ಪರಿಶ್ರಮ ಈ ಕಟ್ಟಡದಲ್ಲಿ ಬಿಂಬಿತವಾಗಿದೆ ಎಂದರು. ಇಡೀ ತಂಡಕ್ಕೆ, ಗ್ರಾಹಕರಿಗೆ, ಸ್ನೇಹಿತರಿಗೆ ಹಾಗೂ ಕುಟುಂಬಗಳಿಗೆ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ವೆಸ್ಟ್‌ಲೈನ್ ತಂಡದ ಸದಸ್ಯರು, ಮಾರಾಟಗಾರರು, ಕಲ್ಸಲ್ಟೆನ್ಸಿ ಸೇವೆ ನೀಡಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕ ಯಾಸಿರ್ ರಹ್ಮಾನ್ ಸನ್ಮಾನ ನೆರವೇರಿಸಿದರು.
ಸರ್ಫರಾಝ್ ಚಮನಾಡ್, ಫ್ರಾಝ್ ಅಹ್ಮದ್, ರಾಜ್‌ಕಿರಣ್ ಮತ್ತು ಮೈನಾಝ್ ನಿಶಾ ನೇತೃತ್ವದ ವೆಸ್ಟ್‌ಲೈನ್ ಸದಸ್ಯರು ಹಾಜರಿದ್ದರು.
ಹೆಚ್ಚಿನ ಚಿತ್ರಗಳಿಗಾಗಿ ಭೇಟಿ ನೀಡಬಹುದು: http://westlinebuilders.com/splendidhomes-constructionupdates
ಕಂಪನಿ ವೆಬ್‌ಸೈಟ್: www.westlinebuilders.com
ಮೊಬೈಲ್: 990003388
ದೂರವಾಣಿ: 08242444444







