Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹೊನ್ನಾವರ: ಬಡ ಯುವಕನ ಸಾವನ್ನು...

ಹೊನ್ನಾವರ: ಬಡ ಯುವಕನ ಸಾವನ್ನು ಸಮರ್ಪಕವಾಗಿ ಬಳಸಿಕೊಂಡ ಸಮಾಜಘಾತುಕ ಶಕ್ತಿಗಳು

ಸಾಮಾಜಿಕ ಜಾಲತಾಣದಲ್ಲಿ ವದಂತಿಗಳದ್ದೇ ಕಾರುಬಾರು

ವಾರ್ತಾಭಾರತಿವಾರ್ತಾಭಾರತಿ9 Dec 2017 10:13 PM IST
share
ಹೊನ್ನಾವರ: ಬಡ ಯುವಕನ ಸಾವನ್ನು ಸಮರ್ಪಕವಾಗಿ ಬಳಸಿಕೊಂಡ ಸಮಾಜಘಾತುಕ ಶಕ್ತಿಗಳು

ಹೊನ್ನಾವರ, ಡಿ.9: ದ್ವೇಷಕಾರುವ ಮನಸ್ಥಿತಿ ಹಾಗು ಸಮಾಜಘಾತುಕ ಶಕ್ತಿಗಳು ಸಾಮಾನ್ಯ ಘಟನೆಯೊಂದನ್ನು ಬಳಸಿಕೊಂಡು ಕೋಮು ಸಾಮರಸ್ಯ ಹದಗೆಡಲು ಯಾವ ಮಟ್ಟಕ್ಕೂ ಹೋಗಬಲ್ಲದು ಎನ್ನುವುದಕ್ಕೆ ಉತ್ತರ ಕನ್ನಡದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಘಟನಾವಳಿಗಳೇ ಸಾಕ್ಷಿಯಾಗಿದೆ.

ಬೈಕ್ ಮತ್ತು ರಿಕ್ಷಾ ನಡುವೆ ನಡೆದ ಅಪಘಾತ ಕೋಮು ಗಲಭೆಯನ್ನೇ ಸೃಷ್ಟಿಸುವ ಮಟ್ಟಕ್ಕೆ ಬಂದು ತಲುಪಿದೆ. ಡಿ.2ರಂದು ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಮೀಲಾದುನ್ನಬಿ ಮತ್ತು ಹನುಮ ಜಯಂತಿ ಆಚರಣೆ ಸಂಬಂಧ ಎರಡು ಕೋಮುಗಳ ನಡುವಿನ ಮನಸ್ತಾಪದ ಹೊಗೆ ಡಿ.6ರಂದು ರಾತ್ರಿ ರಿಕ್ಷಾ ಮತ್ತು ಬೈಕ್ ಅಪಘಾತದಿಂದ ಕೋಮುದಳ್ಳುರಿಯ ಬೆಂಕಿಯನ್ನು ಸೃಷ್ಟಿಸಿದೆ.

ಇದೇ ಘಟನೆಯನ್ನು ಮುಂದಿಟ್ಟುಕೊಂಡು ಎರಡೂ ಕೋಮಿನ ಜನರು ಪರಸ್ಪರ ಕಲ್ಲುತೂರಾಟ ನಡೆಸಿದ್ದು, ಟೆಂಪೋ ಹಾಗೂ ಸಾರ್ವಜನಿಕ ಕಟ್ಟಡಗಳು ದ್ವಂಸಗೊಂಡಿದ್ದು, ಜನಸಾಮಾನ್ಯರು ಅಗತ್ಯ ಕೆಲಸಗಳಿಗೂ ಪರದಾಡುವಂತಾಗಿದೆ. ಘಟನೆಯ ಲಾಭವನ್ನು ಪಡೆಯಲು ಸಂಘಪರಿವಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಸಾಮಾಜಿಕ ಜಾಲತಾಣ ಇದಕ್ಕೆ ಸೂಕ್ತ ವೇದಿಕೆಯಾಗಿದೆ.

ಗಲಭೆಗೆ ಕಾರಣವಾದ ಅಪಘಾತ: ಹೊನ್ನಾವರದ ವೃತ್ತದಲ್ಲಿ ಆಟೋ ರಿಕ್ಷಾವೊಂದಕ್ಕೆ ಬೈಕ್ ಢಿಕ್ಕಿ ಹೊಡೆದಿದ್ದು, ಈ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡ ಸಂಘಪರಿವಾರದ ಕಾರ್ಯಕರ್ತರು ‘ಜೈಶ್ರೀರಾಂ’ ಎಂಬ ಘೋಷಣೆ ಕೂಗುತ್ತಾ ಘರ್ಷಣೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದೆ.  ರಾತ್ರಿ ವೇಳೆಗೆ ಶಾಂತಗೊಂಡಿದ್ದ ಹೊನ್ನಾವರದಲ್ಲಿ ಪರೇಶ್ ಮೇಸ್ತ(19) ಎಂಬ ಖಾರ್ವಿ ಸಮುದಾಯದ ಯುವಕನ ನಾಪತ್ತೆಯೊಂದಿಗೆ ಮತ್ತೊಮ್ಮೆ ಗಲಭೆಯ ಬೆಂಕಿ ಹೊತ್ತಿಕೊಂಡಿದೆ.

ಎರಡು ದಿನಗಳ ನಂತರ ಪರೇಶ್ ಮೇಸ್ತರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಇದಕ್ಕೆ ಮುಸ್ಲಿಮರೇ ಕಾರಣ ಎಂದು ಸಂಘಪರಿವಾರ ಪ್ರತಿಭಟನೆ ನಡೆಸಿದೆ. ಇಷ್ಟು ಸಾಲದೆಂಬಂತೆ ಸಾಮಾಜಿಕ ಜಾಲತಾಣದಲ್ಲೂ ದ್ವೇಷಬಿತ್ತುವ ಕೆಲಸವೂ ಸರಾಗವಾಗಿ ನಡೆಯುತ್ತಿದೆ. “ಪರೇಶ್ ಮೇಸ್ತನನ್ನು ಅಪಹರಣ ಮಾಡಿ, ಮುಖಕ್ಕೆ ಬಿಸಿ ಎಣ್ಣೆ ಸುರಿದು, ಜನನಾಂಗವನ್ನು ಕತ್ತರಿಸಲಾಗಿದೆ” ಎನ್ನುವ ವದಂತಿಗಳು ಹರಿದಾಡುತ್ತಿದೆ.

ದ್ವೇಷ ಹರಡಲು ವೇದಿಕೆಯಾದ ಸಾಮಾಜಿಕ ಜಾಲತಾಣ: ಪರೇಶ್ ಮೇಸ್ತ ಎಂಬ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆಯಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ದ್ವೇಷವನ್ನು ಸಮರ್ಪಕವಾಗಿ ಹರಡಲಾಗಿದೆ. “ಪರೇಶ್ ಮೇಸ್ತನನ್ನು ಮುಸ್ಲಿಮರು ಕೊಂದಿದ್ದಾರೆ. ಆತನನ್ನು ಅಪಹರಿಸಿ ಮುಖಕ್ಕೆ ಬಿಸಿ ಎಣ್ಣೆ ಸುರಿದು, ಜನನಾಂಗವನ್ನು ಕತ್ತರಿಸಿ ಕೊಲೆಗೈಯಲಾಗಿದೆ” ಎನ್ನುವ ಕಪೋಲಕಲ್ಪಿತ ವದಂತಿಗಳು ಹೊನ್ನಾವರವನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಆದರೆ ಪರೇಶ್ ಮೇಸ್ತನ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಪ್ರತ್ಯಕ್ಷದರ್ಶಿಗಳೇ ತಿಳಿಸಿದ್ದಾರೆ ಎನ್ನಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಶಾಲಾ ಕಾಲೇಜುಗಳು ತೆರೆಯದೆ, ಆಸ್ಪತ್ರೆಗಳಲ್ಲಿ ರೋಗಿಗಳು ನರಳುವಂತಹ, ನೀರು, ಪೆಟ್ರೋಲ್ ನಂತಹ ಅಗತ್ಯ ವಸ್ತುಗಳು ದೊರೆದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪರೇಶ್ ಮೇಸ್ತ ಮೃತದೇಹದ ಮರಣೋತ್ತರ ಪರೀಕ್ಷೆಗೂ ಕೆಲವರು ಅಡ್ಡಿಪಡಿಸಿದ್ದು, ಸ್ಥಳೀಯ ವೈದ್ಯರಿಂದ ಪರೀಕ್ಷೆ ನಡೆಸದೆ ಬೇರೆ ಕಡೆಯಿಂದ ವೈದ್ಯರನ್ನು ಕರೆದು ಪರೀಕ್ಷೆ ನಡೆಸಿ ಎಂದೂ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಣಿಪಾಲದ ವೈದ್ಯರಿಂದ ಮರಣೋತ್ತರ ಪರೀಕ್ಷೆಯನ್ನು ನಡೆಸಿದೆ ಎಂದು ಹೇಳಲಾಗಿದೆ.

ರಾಜಕೀಯ ಎಂಟ್ರಿ: ಬೈಕ್ ಹಾಗೂ ರಿಕ್ಷಾ ಅಪಘಾತ ಘಟನೆಯನ್ನು ವೈಭವೀಕರಿಸಿ ವಾಟ್ಸ್ಯಾಪ್ ಮತ್ತು ಫೇಸ್ಬುಕ್ ಗಳ ಮೂಲಕ ಸುದ್ದಿಯನ್ನು ಹರಿಯಬಿಟ್ಟ ಸಮಾಜಘಾತುಕ ಶಕ್ತಿಗಳು “ಹಿಂದೂಗಳೇ ಹೊನ್ನಾವರಕ್ಕೆ ಬನ್ನಿ, ಹೊನ್ನಾವರದ ಹಿಂದೂಗಳ ರಕ್ಷಣೆಗೆ ಬನ್ನಿ”, “ಹಿಂದೂ ಹುಲಿಗಳೇ ಎಲ್ಲಿದ್ದೀರಿ” “ಹಿಂದೂ ಧರ್ಮ ಆಪಾಯದಲ್ಲಿದೆ” ಎನ್ನುವಂತಹ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸಿದೆ.

ಅಲ್ಲದೆ ರಾಜಕೀಯ ನಾಯಕರ ಪ್ರವೇಶದಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಭಟ್ಕಳದ ಸಂಘಪರಿವಾರದ ಗೋವಿಂದ ನಾಯ್ಕ “ನಾವು ಇದಕ್ಕೆ ಸೂಕ್ತ ಉತ್ತರ ಕೊಡುತ್ತೇವೆ” ಎಂದಿದ್ದಾರೆ.  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪರೇಶ್ ಮೇಸ್ತರ ಅಂತಿಮ ದರ್ಶನ ಪಡೆದ ನಂತರ, "ಕೆಳಗಡೆ ಬಿದ್ದಿರುವ ಪ್ರತಿ ಹನಿ ರಕ್ತಕ್ಕೂ ನ್ಯಾಯ ಕೊಡಿಸದೇ ಬಿಡುವುದಿಲ್ಲ" ಎಂದಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರಾದ ಮಾಜಿ ಸಚಿವ ಕಾಗೇರಿ, ಶಿವಾನಂದ ನಾಯ್ಕ, ಸುನಿಲ್ ನಾಯ್ಕ, ಸೂರಜ್ ಸೋನಿ, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರು ಈ ಪ್ರಕರಣವನ್ನು ರಾಜಕೀಯ ಲಾಭಕ್ಕೋಸ್ಕರ ಬಳಸುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಪರೇಶ್ ಮೇಸ್ತ ಸಾವು ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಂಸದೆ ಶೋಭಾ ಕರಂದ್ಲಾಜೆ 

ಹಿನ್ನೆಲೆ: ಹೊನ್ನಾವರದ ಶನೇಶ್ವರ ದೇವಸ್ಥಾನದ ಎದುರಿನಲ್ಲಿರುವ ವಿವಾದಿತ ಸ್ಥಳದಲ್ಲಿ ಇಲ್ಲಿನ ಹಿಂದೂ-ಮುಸ್ಲಿಮರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರು ತಮ್ಮ ಧಾರ್ಮಿಕ ಕಾರ್ಯವನ್ನು ಮಾಡಕೂಡದು ಎಂಬುದು ಸಂಘಪರಿವಾರದ ವಾದ. ಆದರೆ, ತಾಲೂಕಾಡಳಿತದ ದಾಖಲೆಯಲ್ಲಿ ಈ ಜಾಗದಲ್ಲಿ ಮುಸ್ಲಿಮರಿಗೆ ಮೊಹರಂ ಆಚರಿಸಲು ಆವಕಾಶವಿದೆ ಎಂದು ನಮೂದಾಗಿದ್ದು, ಇಲ್ಲಿ ಎರಡೂ ಕೋಮಿನವರಿಗೆ ಅವಕಾಶ ಕಲ್ಪಿಸಲಾಗಿದೆ.

ಈ ವಿವಾದ ಹಲವು ವರ್ಷಗಳಿಂದ ಬಗೆಹರಿಯದೆ ಬೂದಿಮುಚ್ಚಿದ ಕೆಂಡದಂತಿದ್ದು, ಬೈಕ್ ಹಾಗೂ ರಿಕ್ಷಾ ಅಪಘಾತವನ್ನು ಸಮಾಜಘಾತುಕ ಶಕ್ತಿಗಳು ಸಮರ್ಪಕವಾಗಿ ಬಳಸಿಕೊಂಡಿದೆ. ಇದರೊಂದಿಗೆ ಬಡ ಯುವಕನ ಸಾವನ್ನು ಕೂಡ ಈ ಘಟನೆಯೊಂದಿಗೆ ತಳುಕು ಹಾಕಲಾಗಿದೆ. ಘಟನೆಗೆ ಸಂಬಂಧಿಸಿದಂತೆ 40 ಜನರ ಬಂಧನವಾಗಿದೆ.

ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದ ಮೀನುಗಾರರ ಲೆಕ್ಕ ಬರೆಯುವ ಕೆಲಸ ಮಾಡಿಕೊಂಡಿದ್ದ ಅಮಾಯಕ ಪರೇಶ್ ಮೇಸ್ತನ ಸಾವು ಒಂದು ಪೂರ್ವಯೋಜಿತ ಕೊಲೆ ಎಂದು ಬಿಂಬಿಸುವ ಎಲ್ಲ ಪ್ರಯತ್ನಗಳನ್ನು ಮಾಡುವಲ್ಲಿ ಸಂಘಪರಿವಾರ ಯಶಸ್ವಿಯಾಗಿದ್ದು, ಹಿಂದೂಗಳಲ್ಲಿ ವಿಷಬೀಜ ಬಿತ್ತುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ: ಪರೇಶ್ ಮೇಸ್ತನ ಸಾವು ಕೊಲೆ ಎಂದು ಆತನ ಕುಟುಂಬದವರು ಆರೋಪಿಸುತ್ತಿದ್ದು, ಮರಣೋತ್ತರ ಪರೀಕ್ಷೆ ವರದಿ ನಂತರವೇ ಇದನ್ನು ಸ್ಪಷ್ಟವಾಗಿ ಹೇಳಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಪತ್ರಿಕೆಗೆ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X